ಕಡಬ:ಉದ್ಯಮಿಗಳಿಬ್ಬರ ನಡುವೆ ಮಾತಿನ ಚಕಮಕಿ ಬಳಿಕ ಹಲ್ಲೆ,ಹಲ್ಲೆಗೊಳಗಾದ ಉದ್ಯಮಿ ಆಸ್ಪತ್ರೆಗೆ ದಾಖಲು, ಹಲ್ಲೆ ಮಾಡಿದ ಉದ್ಯಮಿ ಪೋಲಿಸ್ ವಶಕ್ಕೆ ಬಳಿಕ ಬಿಡುಗಡೆ!

ಕಡಬ:ಉದ್ಯಮಿಗಳಿಬ್ಬರ ನಡುವೆ ಮಾತಿನ ಚಕಮಕಿ ಬಳಿಕ ಹಲ್ಲೆ,ಹಲ್ಲೆಗೊಳಗಾದ ಉದ್ಯಮಿ ಆಸ್ಪತ್ರೆಗೆ ದಾಖಲು,  ಹಲ್ಲೆ ಮಾಡಿದ ಉದ್ಯಮಿ ಪೋಲಿಸ್ ವಶಕ್ಕೆ ಬಳಿಕ ಬಿಡುಗಡೆ!

ಕಡಬ ಟೈಮ್ಸ್,ಪಟ್ಟಣ ಸುದ್ದಿ: ದಾರಿ ವಿಚಾರಕ್ಕೆ ಸಂಬಂಧಿಸಿದಂತೆ ಕಡಬದ ಉದ್ಯಮಿಗಳಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಬಳಿಕ  ಹಲ್ಲೆ ಮಾಡಿದ ಘಟನೆ ಸೋಮವಾರ  ನಡೆದಿದೆ.

ಉದ್ಯಮಿ ಸತೀಶ್ ನಾಯಕ್ ಎಂಬವರಿಗೆ  ಕಡಬದ ಜುವಾನ ಇಂಡಸ್ಟೀಸ್ ಮಾಲಕ ಬೋಸ್ಕೋ ಎಂಬವರು ಹಲ್ಲೆ ನಡೆಸಿರುವುದಾಗಿದೆ.ಇದೀಗ   ಸತೀಶ್ ನಾಯಕ್  ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಸ್ಥಳಕ್ಕೆ ಕಡಬ ಪೋಲಿಸರು ಆಗಮಿಸಿ ಬೋಸ್ಕೊರವರನ್ನು ವಶಕ್ಕೆ ತೆಗೆದುಕೊಂಡು ಸಂಜೆ ವೇಳೆ  ಬಿಡುಗಡೆಗೊಳಿಸಿದ್ದಾರೆ.

ಈ ಮಧ್ಯೆ ಪೋಲಿಸರು ವಶಪಡಿಸಿಕೊಂಡ ಬೊಸ್ಕೋ ಅವರನ್ನು  ಬಿಡುಗಡೆಗೊಳಿಸಿರುವುದಕ್ಕೆ ಆಕ್ಷೇಪಿಸಿದ್ದು  ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಆರೋಪಿಯನ್ನು ಬಿಟ್ಟಿರುವುದು ಸರಿಯಲ್ಲ, ನಾನು ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು  ಸತೀಶ್ ನಾಯಕ್ ಅವರು ಹೇಳಿದ್ದಾರೆ .

ಆಸ್ಪತ್ರೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಭೇಟಿ
ಕಡಬ ಯುವ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡ ಮಿಥುನ್ ರೈಯವರು ಸತೀಶ್ ನಾಕ್ ದಾಖಲಾಗಿದ್ದ ಕಡಬ ಸಮುದಾಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ, ಅಲ್ಲದೆ ಹಲ್ಲೆ ನಡೆಸಿದ ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೋಲಿಸರನ್ನು ಆಗ್ರಹಿಸಿದ್ದಾರೆ.

970×90