ಸುಂಕದಕಟ್ಟೆ ಜುಮ್ಮಾ ಮಸೀದಿಗೆ ಮುಸ್ಲಿಂ ಲೀಗ್ ವತಿಯಿಂದ ಸ್ಯಾನಿಟೈಸರ್ ಫೂಟ್ ಸ್ಟಾಂಡ್  ಕೊಡುಗೆ

ಸುಂಕದಕಟ್ಟೆ ಜುಮ್ಮಾ ಮಸೀದಿಗೆ ಮುಸ್ಲಿಂ ಲೀಗ್ ವತಿಯಿಂದ ಸ್ಯಾನಿಟೈಸರ್ ಫೂಟ್ ಸ್ಟಾಂಡ್  ಕೊಡುಗೆ

ಕಡಬ ಟೈಮ್ಸ್, ಬಿಳಿನೆಲೆ: ಕಡಬ ತಾಲೂಕಿನ  ಸುಂಕದಕಟ್ಟೆ ಜುಮ್ಮಾ ಮಸೀದಿಗೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕಡಬ ತಾಲೂಕು ಮತ್ತು ಸುಂಕದಕಟ್ಟೆ ಶಾಖೆಯ ವತಿಯಿಂದ ಸ್ಯಾನಿಟೈಸರ್ ಫೂಟ್ ಸ್ಟಾಂಡ್  ನ್ನು ಶನಿವಾರ ಹಸ್ತಾಂತರಿಸಲಾಯಿತು.

ಮಹಾಮಾರಿ ಕೊರೊನಾದ ವಿರುದ್ದ  ಜನರು  ಸ್ವಯಂ ಪ್ರೇರಿತರಾಗಿ  ಜಾಗ್ರತೆ ವಹಿಸಬೇಕೆಂಬ ಸರ್ಕಾರದ ಆದೇಶವನ್ನುಗಮನಿಸಿ ಮುಸ್ಲಿಂ ಲೀಗ್ ನ ಕಾರ್ಯಕರ್ತರು ಉಚಿತವಾಗಿ ಈ ಕೊಡುಗೆ ನೀಡಿದ್ದಾರೆ.

ಈ ವೇಳೆ  ಸಂಘಟಕ ಸೀಯಾಬ್ ,ರೌಫ್ ,ಸುಂಕದಕಟ್ಟೆ ಮಸೀದಿ ಜಮಾಅತ್ ಅದ್ಯಕ್ಷ ಖಾದರ್ ಹಾಜಿ, ಪಂಚಾಯತ್ ಸದಸ್ಯ ಎಂ.ಪಿ ಯೂಸುಫ್. ಎಸ್ಕೆ ಎಸ್ಸೆಸ್ಸೆಫ್ ಕಾರ್ಯದರ್ಶಿ ನವಾಝ್ , ಅನ್ಸಾರುಲ್ ಇಸ್ಲಾಂ ಯಂಗ್ ಮೆನ್ಸ್ ಅದ್ಯಕ್ಷ ಫಾರೂಕ್, ಪಿ.ಕೆ ಉಸ್ತಾದ್, ಅಬ್ದುಲ್‌ ಲತೀಫ್,ಮುಹಮ್ಮದ್ ಹಾರೀಸ್, ಅಶ್ರಫ್,ಅಝೀಝ್ ಉಪಸ್ಥಿತರಿದ್ದರು.

970×90