ಪಂಜದ  ಚಿಂಗಾಣಿಗುಡ್ಡೆಯಲ್ಲಿ ಚಿರತೆ ವಾಕಿಂಗ್!

 ಪಂಜದ  ಚಿಂಗಾಣಿಗುಡ್ಡೆಯಲ್ಲಿ ಚಿರತೆ ವಾಕಿಂಗ್!

ಕಡಬ ಟೈಮ್ಸ್, ಪಂಜ:ಕಡಬ ತಾಲೂಕಿನ ಪಂಜದ  ಚಿಂಗಾಣಿಗುಡ್ಡೆಯಲ್ಲಿ  ಚಿರತೆಯೊಂದು ಪ್ರತ್ಯಕ್ಷವಾಗಿದ್ದು  ಈ ಪರಿಸರದ ಗ್ರಾಮಸ್ಥರಲ್ಲಿ  ಭಯ ಹುಟ್ಟಿಸಿದೆ.

ಚಿಂಗಾಣಿಗುಡ್ಡೆ ಸಮೀಪದ ಕೋಡಿ ಎಂಬಲ್ಲಿ ರಾಜೇಶ್ ಎಂಬವರಿಗೆ ಚಿರತೆ ಕಾಣಲು ಸಿಕ್ಕಿದ್ದು, ಬಳಿಕ ಅದು ಪೊದೆಯೊಳಗೆ ಹೋಗಿ ನಾಪತ್ತೆಯಾಗಿತ್ತು. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು.

ಇದೀಗ ಚಿರತೆ ಇದೆ ಎನ್ನಲಾದ ಸ್ಥಳದಲ್ಲಿ  ನಾಯಿಯನ್ನು ಕೂಡಿ ಹಾಕಿ ಬೋನು ಇರಿಸಿದ್ದಾರೆ.  ಕೆಲವು ತಿಂಗಳ ಹಿಂದೆ ಪಂಜ ಸಮೀಪದ ಬಳ್ಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿತ್ತು.

970×90