ಕಡಬ: ಮುಸ್ಲಿಂ ಲೀಗ್ ವತಿಯಿಂದ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ

ಕಡಬ: ಮುಸ್ಲಿಂ ಲೀಗ್ ವತಿಯಿಂದ ಸ್ಯಾನಿಟೈಸರ್ ಸ್ಟಾಂಡ್ ಕೊಡುಗೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ:   ಇಲ್ಲಿನ ರಹ್ಮಾನಿಯ ಜುಮ್ಮಾ ಮಸೀದಿಯಲ್ಲಿ ಶುಕ್ರವಾರ ಜಮ್ಮಾ ನಮಾಜ್ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಕೊರೊನಾದ ಸುರಕ್ಷತೆಗಾಗಿ ಉಚಿತ ಸ್ಯಾನಿಟೈಸರ್ ಫೂಟ್ ಸ್ಟಾಂಡ್ ವಿತರಿಸಲಾಯಿತು.

ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ವತಿಯಿಂದ ಈ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಲಾಗಿದೆ.

ಈ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಸಂಘಟಕರಾದ ಸಿದ್ದೀಕ್ ಕೊರುಂದೂರು , ಶಂಸುದ್ದೀನ್ ಪನ್ಯ , ಆರ್.ಟಿ.ಜೆ.ಎಂ ಪ್ರಧಾನ ಕಾರ್ಯದರ್ಶಿ ಎಸ್. ಎ .ಅಬ್ದುಲ್‌ ಹಮೀದ್, ಸಯ್ಯದ್, ಆದಂ, ಮಸೀದಿ ಗುರು ಅಬ್ದುಲ್‌ ಹಮೀದ್ ಮುಸ್ಲಿಯಾರ್ ಉಪಸ್ಥಿತರಿದ್ದರು.

970×90