ಕಡಬ ಟೈಮ್ಸ್ ವರದಿ ಬೆನ್ನಲ್ಲೇ ಹಾನಿಯಾಗಿದ್ದ ಪಂಚಾಯತ್ ಆಸ್ತಿಯ ದುರಸ್ತಿ

ಕಡಬ ಟೈಮ್ಸ್ ವರದಿ ಬೆನ್ನಲ್ಲೇ ಹಾನಿಯಾಗಿದ್ದ ಪಂಚಾಯತ್ ಆಸ್ತಿಯ ದುರಸ್ತಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕಡಬ ಗ್ರಾ.ಪಂ ನ ಅಂಗಳದಿಂದ ಇಂಟರ್ ಲಾಕ್ ನ್ನು ಗ್ರಾ.ಪಂ ಸದಸ್ಯರೊಬ್ಬರು ಲೋಡು ಮಾಡಿ ಕೊಂಡು ಹೋಗುವ ಭರದಲ್ಲಿ  ಹಾನಿಯಾಗಿದ್ದ ಪಂಚಾಯತ್ ಆಸ್ತಿಯ ದುರಸ್ತಿ ಕಾರ್ಯ ಭರದಿಂದ ಸಾಗುತ್ತಿದೆ.

ಹಾನಿಗೊಂಡು ದುರಸ್ತಿಯಾಗದ  ಬಗ್ಗೆ   ಕಡಬ ಟೈಮ್ಸ್  ಸುದ್ದಿ ತಾಣವು  ಅನುಮತಿ ಇಲ್ಲದೆ ಇಂಟರ್ ಲಾಕ್ ಕೊಂಡು ಹೋಗುವ ಭರದಲ್ಲಿ ಗ್ರಾ.ಪಂ ಆಸ್ತಿಗೆ ಹಾನಿ,ಸರಿಪಡಿಸಲು ಎಷ್ಟು ದಿನ ಬೇಕು? ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಇಂಟರ್ ಲಾಕನ್ನು ಕೊಂಡು ಹೋಗುವ ಭರದಲ್ಲಿ ಪಂಚಾಯತ್ ಆವರಣದಲ್ಲಿದ್ದ  ಕಬ್ಬಿಣದ ಶೀಟು, ಕಂಬ ಮತ್ತು ಗೋಡೆಗೆ ಹಾನಿ ಮಾಡಿದ್ದರು  .ಇದೀಗ ದುರಸ್ತಿ ಕಾರ್ಯ ಮಾಡುವ ಮೂಲಕ ತಮ್ಮ ಜವಾಬ್ದಾರಿ ಮೆರೆದಿದ್ದಾರೆ.

970×90