ಶಿಶಿಲದಲ್ಲಿ ದೇವರ ಮೀನುಗಳ ಕಳ್ಳತನ ,ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆ

ಶಿಶಿಲದಲ್ಲಿ ದೇವರ ಮೀನುಗಳ ಕಳ್ಳತನ ,ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆ

ಕಡಬ ಟೈಮ್ಸ್, ಕೊಕ್ಕಡ:  ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶ್ರೀ ಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ 7 ಮಂದಿಯನ್ನು ಸ್ಥಳೀಯ  ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೋಮವಾರ  ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ

ದೇವಾಲಯದ ದೇವರ ಕೆರೆಯಲ್ಲಿ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯುತ್ತಿದ್ದ ಬಗ್ಗೆ ಮೊದಲೇ ಮಾಹಿತಿ ಇದ್ದ  ಸ್ಥಳೀಯ  ಹಿಂದೂ ಜಾಗರಣ ವೇದಿಕೆ ಸಂಘಟನೆಯ ಕಾರ್ಯಕರ್ತರು  ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಕಾದು ಕುಳಿತಿದ್ದರು.

ಸೋಮವಾರವೂ ಮೀನು ಕಳ್ಳತನಕ್ಕೆ ಗುಂಪೊಂದು ಬಂದಾಗ ಹಿಡಿದು ಥಳಿಸಿದ್ದಾರೆ.   ಅರಸಿನಮಕ್ಕಿ ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆಸಿಕ್ಕಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

970×90