ಕಡಬ:ತಾಲೂಕು ಆಡಳಿತ ವತಿಯಿಂದ ನಾಳೆ’ ಮಾಸ್ಕ್ ದಿನ’ ಆಚರಣೆ |ಪಾದಯಾತ್ರೆಮೂಲಕ ಜನಜಾಗೃತಿ

ಕಡಬ:ತಾಲೂಕು ಆಡಳಿತ ವತಿಯಿಂದ ನಾಳೆ’ ಮಾಸ್ಕ್ ದಿನ’ ಆಚರಣೆ |ಪಾದಯಾತ್ರೆಮೂಲಕ ಜನಜಾಗೃತಿ

ಕಡಬ ಟೈಮ್ಸ್, ಪಟ್ಟಣ ಸುದ್ದಿ:  ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜೂ.18ರಂದು ರಾಜ್ಯದಾದ್ಯಂತ ಪಾದಯಾತ್ರೆ ಕೈಗೊಂಡು ’ಮಾಸ್ಕ್ ದಿನ’ ಆಚರಿಸುವ ಮೂಲಕ ಜನ ಜಾಗೃತಿ ಮೂಡಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದ್ದು ಕಡಬ ಪಟ್ಟಣದಲ್ಲೂ ಪಾದಯಾತ್ರೆಯ ಮೂಲಕ ಜನಜಾಗೃತಿ ನಡೆಯಲಿದೆ.

ಕಡಬ ತಾಲೂಕು ಆಡಳಿತ  ಸಿದ್ದತೆ ಮಾಡಿಕೊಂಡಿದ್ದು ಗುರುವಾರ ಮುಂಜಾನೆ  11 ಗಂಟೆಗೆ ತಹಶೀಲ್ದಾರ್  ಕಛೇರಿಯಿಂದ ಪಂಜ ರಸ್ತೆ ಕ್ರಾಸ್ ತನಕ ಜಾಗೃತಿ ಮೂಡಿಸುವ ಪಾದಯಾತ್ರೆ ನಡೆಯಲಿದೆ.

ಕೋವಿಡ್ – 19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಮುಖಗವಸು (ಮಾಸ್ಕ್) ಧರಿಸುವುದು, ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಪ್ರಾಮುಖ್ಯವಾದ ವೈದ್ಯಕೀಯೇತರ ಪಾಲನೆಯಾಗಿದೆ.  ಈ ಕುರಿತು ಜನ ಸಮುದಾಯದಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ರಾಜ್ಯ ಸರ್ಕಾರವು 18ನೇ ಜೂನ್ 2020ರ ಗುರುವಾರದಂದು ’ಮಾಸ್ಕ್ ದಿನ’ ವನ್ನಾಗಿ ಘೋಷಿಸಲು ನಿರ್ಧರಿಸಿದ್ದು, ಜಿಲ್ಲಾ ಮತ್ತು ತಾಲೂಕು ಆಡಳಿತವು ಚುನಾಯಿತ ಪ್ರತಿನಿಧಿಗಳು, ಗಣ್ಯವ್ಯಕ್ತಿಗಳು, ವೈದ್ಯಕೀಯ ಸಿಬ್ಬಂದಿಗಳನ್ನು ಭಾಗವಹಿಸಿಕೊಂಡು ಪಾದಯಾತ್ರೆಯ ಮೂಲಕ ಹಲವು ಕ್ರಮಗಳನ್ನು ಕೈಗೊಳ್ಳತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

970×90