ಕುಕ್ಕೆ ದೇಗುಲದಿಂದ ನಿರ್ಮಾಣಗೊಂಡ ಹಟ್ಟಿಯ ಬೈಪಣೆ ಉದ್ಘಾಟನೆಗೆ ಮುನ್ನವೇ ಕೆಡವಿದರು ,ಈ ನಷ್ಟಕ್ಕೆ ಯಾರು ಹೊಣೆ?

ಕುಕ್ಕೆ ದೇಗುಲದಿಂದ ನಿರ್ಮಾಣಗೊಂಡ ಹಟ್ಟಿಯ ಬೈಪಣೆ ಉದ್ಘಾಟನೆಗೆ ಮುನ್ನವೇ ಕೆಡವಿದರು ,ಈ ನಷ್ಟಕ್ಕೆ ಯಾರು ಹೊಣೆ?

ಕಡಬ ಟೈಮ್ಸ್, ಸುಬ್ರಹ್ಮಣ್ಯ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ನಿರ್ಮಾಣಗೊಂಡ ಹಟ್ಟಿಯ ಬೈಪಣೆ ಅಸಮರ್ಪಕವಾಗಿರುವ  ಹಿನ್ನೆಲೆಯಲ್ಲಿ ಒಡೆದು ತೆಗೆಯಲಾಗಿದೆ

ಹಟ್ಟಿಯ ಕೆಲಸ ಬಹುತೇಕ ಪೂರ್ಣಗೊಂಡು ಉದ್ಘಾಟನೆಯಷ್ಟೆ ಬಾಕಿ ಉಳಿದಿತ್ತು.ಇದೀಗ ಹಟ್ಟಿಯ ಬೈಪಣೆಯನ್ನು  ಒಡೆದು ತೆಗೆದಿರುವುದು ಸಂಶಯಕ್ಕೆ  ಕಾರಣವಾಗಿದೆ.

ಹೊಸದಾಗಿ ರಚನೆಗೊಂಡ ಹಟ್ಟಿಯ ಬೈಪಣೆ ಉದ್ಘಾಟನೆಗೆ ಮುಂಚಿತವಾಗಿ ಒಡೆದು ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ. ಕಟ್ಟುವಾಗಲೇ  ಕೆಲ  ನಾಗರ್ರಿಕರು ಬೈಪಣೆ ತಗ್ಗಿಸಿ ನಿರ್ಮಿಸುವಂತೆ ಸಲಹೆ ನೀಡಿದ್ದರು. ಈ ನಷ್ಟಕ್ಕೆ ಯಾರು ಹೊಣೆ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

970×90