ಕಡಬ ಪಟ್ಟಣ: ಚರಂಡಿ ಕಾಮಗಾರಿ, ನಿರ್ವಹಣೆ ಶುರು ಮಾಡಲು ಇನ್ನೆಷ್ಟು ಸಭೆಗಳು ನಡೆಯಬೇಕು?

ಕಡಬ ಪಟ್ಟಣ: ಚರಂಡಿ ಕಾಮಗಾರಿ, ನಿರ್ವಹಣೆ ಶುರು ಮಾಡಲು ಇನ್ನೆಷ್ಟು ಸಭೆಗಳು ನಡೆಯಬೇಕು?

ಕಡಬ ಟೈಮ್ಸ್, ವಿಶೇಷ ವರದಿ:ಜೂನ್ ತಿಂಗಳ ಮೊದಲ ವಾರದಿಂದಲೇ  ಮಳೆಗಾಲ ಆರಂಭವಾಗಿದೆ. ಇನ್ನೊಂದೆಡೆ ಗ್ರಾ.ಪಂ. ಚುನಾಯಿತ ಸದಸ್ಯರ ಅಧಿಕಾರವಧಿಯು ಕೆಲವೇ ದಿನಗಳಲ್ಲಿ ಮುಗಿಯಲಿವೆ.ಈ ನಡುವೆ ಮಳೆಗಾಲದ ಪೂರ್ವಭಾವಿಯಾಗಿ ಕಡಬ ತಾಲೂಕಿನ  ಗ್ರಾ.ಪಂ. ವ್ಯಾಪ್ತಿಗಳಲ್ಲಿ ಅಗತ್ಯವಾಗಿ ನಡೆಯಬೇಕಾದ ಚರಂಡಿ ಕಾಮಗಾರಿ, ನಿರ್ವಹಣೆ ಕೆಲಸಗಳು ಹೆಚ್ಚಿನ ಕಡೆಗಳಲ್ಲಿ  ಇನ್ನೂ ಆಗಿಲ.

ಕಡಬ ತಾಲೂಕು ಕೇಂದ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಗಳ   ಚರಂಡಿಗಳಲ್ಲಿ  ಕಸಕಡ್ಡಿ, ಮಣ್ಣು, ತ್ಯಾಜ್ಯ ತುಂಬಿ ಹೋಗಿದ್ದು, ಗಿಡಗಂಟಿ ಗಳು ಆವರಿಸಿ ನೀರಿನ ಹರಿವಿಗೆ ತಡೆ ಯೊಡ್ಡುತ್ತಿದೆ.  ಕೆಲವೆಡೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಅಲ್ಲದೆ ಇನ್ನು ಕೆಲವೆಡೆ ಮಳೆನೀರು ನಿಂತು ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆ ಉತ್ಪಾದನ ಕೇಂದ್ರಗಳು ನಿರ್ಮಾಣವಾಗುತ್ತಿವೆ.

ಕಡಬ -ಪಂಜ ರಸ್ತೆಯ ಕಲ್ಲಂತಡ್ಕ ಬಳಿ ಚರಂಡಿ ಮುಚ್ಚಿರುವುದು

ಕೆಲವು  ಗ್ರಾ.ಪಂ.ಗಳು  ಕೇವಲ ಪೇಟೆಯ ಚರಂಡಿಯ ನಿರ್ವಹಣೆಗಷ್ಟೇ ಒತ್ತು ನೀಡುತ್ತಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿ ನಿರ್ವಹಣೆ ಮಾಡುತ್ತಿಲ್ಲ.  ಕಡಬ-ಪಂಜ ರಸ್ತೆಯುದ್ದಕ್ಕೂ ಚರಂಡಿಗಳು ಮುಚ್ಚಿಹೋಗಿದ್ದು ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ಕೆಲವು ಮನೆಗೆ ನಿರ್ಮಿಸಿರುವ ದಾರಿಯಿಂದ ಚರಂಡಿಗಳು ಮುಚ್ಚಿಹೋಗಿವೆ.

ಇತ್ತೀಚೆಗೆ ಕಡಬದಲ್ಲಿ ನಡೆದ ಮೊದಲ ತಾ.ಪಂ ಸಭೆಯಲ್ಲಿ ಚರಂಡಿ ದುರಸ್ತಿಯ ಕುರಿತಾಗಿ ಚರ್ಚೆಯಾಗಿ ಅಧಿಕಾರಿಗಳು ಕೆಲಸ ಆರಂಭಿಸುವ ಭರವಸೆ ಸಭೆಗೆ ಮಾತ್ರ ಸೀಮಿತಗೊಂಡಿದ್ದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

970×90