ಎಡಮಂಗಲ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಭರತ್ ಬಿ.ಎಂ ಭಡ್ತಿ

ಎಡಮಂಗಲ: ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಭರತ್ ಬಿ.ಎಂ ಭಡ್ತಿ

ಕಡಬ ಟೈಮ್ಸ್, ಎಡಮಂಗಲ: ಪುತ್ತೂರು ಪಂಚಾಯತ್ ರಾಜ್ ಇಂಜಿನಿಯರ್ ಉಪವಿಭಾಗದಲ್ಲಿ ಸಹಾಯಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭರತ್ ಬಿ.ಎಂ.ರವರು  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ ಜೂ.10ರಂದು ಭಡ್ತಿ ಹೊಂದಿದ್ದಾರೆ.

೨೦೧೬ ರಿಂದ ೨೦೧೭ ರ ಅವಧಿಯಲ್ಲಿ ಇವರು ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಕಡೂರಿನಲ್ಲಿ ಕರ್ತವ್ಯ ನಿರ್ವಹಿಸಿ ಪುತ್ತೂರಿಗೆ ವರ್ಗಾವಣೆಗೊಂಡು ಕಡಬ ವ್ಯಾಪ್ತಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು.

ಭರತ್ ಬಿ.ಎಂ.ರವರು  ಎಡಮಂಗಲದ  ದಿ.ಡಾ.ಬಿ.ಮೋಹನ ಕುಮಾರ್ ಬಳಕ್ಕಬೆ ಮತ್ತು ಶ್ರೀಮತಿ ಶಶಿಕಲಾ ಮೋಹನ್ ಕುಮಾರ್ ದಂಪತಿಯ ಪುತ್ರ.

970×90