ಕೊಕ್ಕಡ –ಧರ್ಮಸ್ಥಳ ರಸ್ತೆಯಲ್ಲಿ ಸಂಚರಿಸುವ ಮುನ್ನ ಎಚ್ಚರ!

ಕೊಕ್ಕಡ –ಧರ್ಮಸ್ಥಳ ರಸ್ತೆಯಲ್ಲಿ ಸಂಚರಿಸುವ ಮುನ್ನ ಎಚ್ಚರ!

ಕಡಬ ಟೈಮ್ಸ್, ಕೊಕ್ಕಡ: ಕೊಕ್ಕಡ – ಧರ್ಮಸ್ಥಳ ರಾಜ್ಯ ರಸ್ತೆಯ ಪಾರ್ಪಿಕಲ್ ಎಂಬಲ್ಲಿ ರಸ್ತೆಯ ಎತ್ತರವನ್ನು ತಗ್ಗಿಸಿ , ತಗ್ಗು ರಸ್ತೆಗೆ ಮಣ್ಣು ತುಂಬಿಸಿ ಸಮತಟ್ಟುಗೊಳಿಸುವ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯನ್ನು ತೆಗೆದು ಸಮತಟ್ಟುಗೊಳಿಸುವ ಕಾರ್ಯ ಪೂರ್ಣಗೊಳ್ಳದಿರುವುದರಿಂದ ಈ ಸಮಸ್ಯೆ ಉಂಟಾಗಿದ್ದು ತಗ್ಗು ರಸ್ತೆಗೆ ಮಣ್ಣು ತುಂಬಿಸುವ ಸಂದರ್ಭ ಇಡೀ ರಸ್ತೆಗೆ ಮಣ್ಣು ತುಂಬಿಸಿ ಎತ್ತರಿಸಿದ್ದರಿಂದ ಈಗ ಸುರಿಯುತ್ತಿರುವ ಮಳೆಗೆ ರಸ್ತೆ ಕೆಸರುಮಯವಾಗಿದೆ. ಹಲವಾರು ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದ ಘಟನೆಗಳು ನಡೆದಿದೆ .

ಗುತ್ತಿಗೆದಾರರು, ಜನಪ್ರತಿನಿಧಿಗಳು ಕೂಡಲೇ ಗಮನಹರಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾಗಿದೆ .

970×90