ಸ್ಯಾಂಡಲ್​ವುಡ್ ನ ಹೆಸರಾಂತ ನಟ ಚಿರಂಜೀವಿ ಸರ್ಜಾ ನಿಧನ

ಸ್ಯಾಂಡಲ್​ವುಡ್ ನ ಹೆಸರಾಂತ  ನಟ ಚಿರಂಜೀವಿ ಸರ್ಜಾ ನಿಧನ

ಕಡಬ ಟೈಮ್ಸ್, ಬೆಂಗಳೂರು:  ಸ್ಯಾಂಡಲ್​ವುಡ್​ ಪಾಲಿಗೆ ಭಾನುವಾರ ಕಹಿ ದಿನವಾಗದ್ದು  ಖ್ಯಾತ ನಟ ಚಿರಂಜೀವಿ ಸರ್ಜಾ ಆದಿತ್ಯವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಚಿರಂಜೀವಿ ಸರ್ಜಾಗೆ ಶನಿವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ 39 ವರ್ಷ ವಯಸ್ಸಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.  ಸದ್ಯ ಜಯನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿರಂಜೀವಿ ಸರ್ಜಾ ಮೃತದೇಹ ಇಡಲಾಗಿದೆ.

ಚಿರಂಜೀವಿ ಸರ್ಜಾ ನಟಿ ಮೇಘನಾ ರಾಜ್​ ಅವರ ಜೊತೆ 2017ರಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 2018ರಲ್ಲಿ ವಿವಾಹವಾಗಿದ್ದರು. ಇದಾದ ಎರಡೇ ವರ್ಷದಲ್ಲಿ ಅವರು ಮೃತಪಟ್ಟಿದ್ದಾರೆ. ಅವರ ಸಾವಿಗೆ ಇಡೀ ಕನ್ನಡ ಚಿತ್ರರಂಗ ಕಂಬನಿ ಸುರಿಸಿದೆ.

970×90