ಕಡಬ: ಕೊರೋನಾ ದೃಢಪಟ್ಟ ವ್ಯಕ್ತಿ ಬ್ಯಾಂಕ್ ಗೆ ಭೇಟಿ ನೀಡಿದ ಹಿನ್ನೆಲೆ l 174 ಸದಸ್ಯರ ಪಟ್ಟಿ ಆರೋಗ್ಯ ಇಲಾಖೆಗೆ!

ಕಡಬ: ಕೊರೋನಾ ದೃಢಪಟ್ಟ ವ್ಯಕ್ತಿ ಬ್ಯಾಂಕ್ ಗೆ ಭೇಟಿ ನೀಡಿದ ಹಿನ್ನೆಲೆ  l 174 ಸದಸ್ಯರ ಪಟ್ಟಿ ಆರೋಗ್ಯ ಇಲಾಖೆಗೆ!

ಕಡಬ ಟೈಮ್ಸ್, ಪಟ್ಟಣ ಸುದ್ದಿ: ಕೊರೋನಾ ದೃಢಪಟ್ಟ ವ್ಯಕ್ತಿಮತ್ತು ಅವರ ಮನೆಯವರು ಕಡಬ ಸಿ.ಎ. ಬ್ಯಾಂಕ್ ಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಿಎ ಬ್ಯಾಂಕನ್ನು  ಹತ್ತು ದಿನಗಳವರೆಗೆ ಮುಚ್ಚಲಾಗಿದೆ.

ಜೂನ್ ೨ ರಿಂದ ೫ರ ವರೆಗಿನ ಸಿಸಿಟಿವಿ ಆಧಾರಿಸಿ ಬ್ಯಾಂಕ್ ಶಾಖೆಗೆ  ಭೇಟಿ ನೀಡಿದ ಸದಸ್ಯರ ಮಾಹಿತಿಯನ್ನು ಪರಿಶೀಲಿಸಿ 174 ಸದಸ್ಯರ ಪಟ್ಟಿಯನ್ನು ಆರೋಗ್ಯ ಇಲಾಖೆಗೆ ನೀಡಿದ್ದಾರೆ. ಅಲ್ಲದೆ ಬ್ಯಾಂಕ್ ಸಿಬ್ಬಂದಿಗಳು ಸ್ವಯಂ ಕ್ವಾರೈಂಟೆನ್ ಗೆ ಒಳಗಾಗಿದ್ದಾರೆ.

ಈ ಬಗ್ಗೆ ಅಧ್ಯಕ್ಷ ರಮೇಶ್ ಕಲ್ಪುರೆ ಶನಿವಾರ ನಡೆದ ಕೊರೋನಾ ಮುಂಜಾಗೃತಾ ತುರ್ತು ಸಭೆಯಲ್ಲೂ ವಿಷಯ ಪ್ರಸ್ತಾಪಿಸಿದ್ದರು ಜೊತೆಗೆ ಶಾಖೆಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ಮಾಡಲು ಅಗತ್ಯ ಇರುವ ಸ್ಯಾನಿಟೈಸರ್ ಸಿಗುತ್ತಿಲ್ಲ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ರ ಗಮನಕ್ಕೆ ತಂದರು.

970×90