ಕೊಯಿಲ-ನೆಹರು ತೋಟ ರಸ್ತೆಗೆ ಡಾಂಬರೀಕರಣ ಭಾಗ್ಯ l ಶಾಸಕ ಎಸ್.ಅಂಗಾರರಿಂದ ಶಿಲಾನ್ಯಾಸ

ಕೊಯಿಲ-ನೆಹರು ತೋಟ ರಸ್ತೆಗೆ ಡಾಂಬರೀಕರಣ ಭಾಗ್ಯ l ಶಾಸಕ ಎಸ್.ಅಂಗಾರರಿಂದ ಶಿಲಾನ್ಯಾಸ

ಕಡಬ ಟೈಮ್ಸ್, ಕೊಯಿಲ: ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ  ಕೊಯಿಲದಿಂದ ನೆಹರುತೋಟ ತನಕದ ರಸ್ತೆ ಡಾಂಬಾರೀಕರಣ ಕಾಮಗಾರಿಗೆ ಶನಿವಾರ ಶಾಸಕ ಎಸ್.ಅಂಗಾರ  ಶಿಲಾನ್ಯಾಸ  ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಈ ರಸ್ತೆಯ ಡಾಂಬರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ೧.೨೫ ಕೋಟಿ ರೂಪಾಯಿ ಅನುದಾನ ಮಂಜೂರು ಆಗಿದ್ದು, ಈ ಭಾಗದ ಜನರ ಬಹುಕಾಲದ ಸಮಸ್ಯೆಗೆ ಮುಕ್ತಿ ಸಿಗಲಿದೆ.ಈ  . ರಸ್ತೆಯು  ೩.೫ ಮೀಟರ್ ಇದ್ದುದು ೫.೫ ಮೀಟರ್ ಆಗಲ ಆಗಲಿದೆ, ಮುಂದೆ ಜಿಲ್ಲಾ ಮುಖ್ಯ ರಸ್ತೆಯಾದ ಬಳಿಕ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ಕೊಯಿಲ-ಹಿರೇಬಂಡಾಡಿ-ಉಪ್ಪಿನಂಗಡಿ ಸಂಪರ್ಕದ ೯ ಕಿ.ಮೀ. ಉದ್ದದ ಈ ರಸ್ತೆ ಕೊಯಿಲದಿಂದ ಶಾಖೆಪುರ ತನಕ  ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತು ಶಾಖೆಪುರದಿಂದ ಉಪ್ಪಿನಂಗಡಿ ತನಕ ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಾದು ಹೋಗುತ್ತಿದ್ದು, ಕೊಯಿಲ, ಹಿರೇಬಂಡಾಡಿ, ಉಪ್ಪಿನಂಗಡಿ ಗ್ರಾಮಗಳ ಜನತೆಯ ಮುಖ್ಯ ಸಂಪರ್ಕ ರಸ್ತೆಯಾಗಿದೆ.ಈ ರಸ್ತೆ ಸುಮಾರು ೨೫ ವರ್ಷಗಳ ಹಿಂದೆ ಡಾಂಬರೀಕರಣ ಆಗಿತ್ತು. ಕಾರ್ಯಕ್ರಮದಲ್ಲಿ ರಾಮಕುಂಜ ತಾ.ಪಂ  ಸದಸ್ಯೆ ಶ್ರೀಮತಿ ಜಯಂತಿ ಗೌಡ, ಕೊಯಿಲ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಹೇಮಾ ಮೋಹನ್‌ದಾಸ್ ಶೆಟ್ಟಿ  ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

970×90