ಕಡಬ ತಹಸೀಲ್ದಾರ್ ನೇತೃತ್ವದಲ್ಲಿ ಕೊರೋನಾ ಮುಂಜಾಗ್ರತಾ ತುರ್ತು ಸಭೆ:ವರ್ತಕರಲ್ಲಿ ಮೂಡದ ಒಮ್ಮತ!

ಕಡಬ ತಹಸೀಲ್ದಾರ್ ನೇತೃತ್ವದಲ್ಲಿ ಕೊರೋನಾ ಮುಂಜಾಗ್ರತಾ ತುರ್ತು ಸಭೆ:ವರ್ತಕರಲ್ಲಿ ಮೂಡದ ಒಮ್ಮತ!

ಕಡಬ ಟೈಮ್ಸ್,ಪಟ್ಟಣ ಸುದ್ದಿ:ಕಡಬದ ವ್ಯಕ್ತಿಗೆ ಕೊರೋನಾ ಸೊಂಕು ದೃಢವಾದ ಹಿನ್ನಲೆಯಲ್ಲಿ ತಹಸೀಲ್ದಾರ್  ಜಾನ್ ಪ್ರಕಾಶ್ ರೋಡ್ರಿಗಸ್ ನೇತೃತ್ವದಲ್ಲಿ ತುರ್ತು ಸಭೆಯು ಶನಿವಾರ   ಕಡಬದ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸಭೆಯಲ್ಲಿ ವರ್ತಕರಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗಿದ್ದು ಕೆಲ ಹೊತ್ತು  ಕಾಲಹರಣದ ಸಭೆಯಾಯಿತು.ನಂತರ ಸಭೆ ಮುಂದುವರಿದು ವರ್ತಕರಲ್ಲಿ ಒಮ್ಮದ ಅಭಿಪ್ರಾಯ ಮೂಡದೆ ಮುಂಜಾಗೃತ ಕ್ರಮವಹಿಸಿ ಯಥಾ ಸ್ಥಿತಿಯಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡಲು ತೀರ್ಮಾನಿಸಲಾಯಿತು. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವಲ್ಲಿ ಕಟ್ಟು ನಿಟ್ಟಿನ ಕ್ರಮವನ್ನು ಅನುಸರಿಸುವ ಬಗ್ಗೆ ನಿರ್ಧರಿಸಲಾಯಿತು.

ಕೆಲ ವರ್ತಕರು ಏಳು ದಿನ ಸಂಪೂರ್ಣ ಕಡಬ ಬಂದ್ ಮಾಡಿದರೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಇದಲ್ಲದೆ  ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟರೆ ಸಾಕು ಎಂದರೆ ಮತ್ತೆ ಕೆಲವರು ಇನ್ನು ಕೆಲವು ವರ್ತಕರು ಮಧ್ಯಾಹ್ನದವರೆಗೆ ಅಂಗಡಿ ತೆರೆದರೆ ಜನರ ಒತ್ತಡ ಉಂಟಾಗಿ ಗ್ರಾಹಕರು ಅಂತರ ಕಾಯ್ದುಕೊಳ್ಳುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಹಸೀಲ್ದಾರ್ ಜಾನ್ ಪ್ರಕಾಶ್ , ಕಡಬ ಜಿ.ಪಂ. ಸದಸ್ಯ ಪಿ.ಪಿ.ವರ್ಗೀಸ್, ಮಾಜಿ ಜಿ.ಪಂ. ಸದಸ್ಯ ಕೃಷ್ಣ ಶೆಟ್ಟಿ,  ತಾ.ಪಂ. ಸದಸ್ಯ ಫಝಲ್ ಕೋಡಿಂಬಾಳ,  ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಕಡಬ ವೈದ್ಯಾಧಿಕಾರಿ ಡಾ. ಸುಚಿತ್ರಾ ರಾವ್,  ಕಡಬ ಠಾಣಾ ಸಬ್ ಇನ್ಸ್ಪೆಕ್ಟರ್ ರುಕ್ಮ ನಾಕ್,  ಕಡಬ ವರ್ತಕ ಸಂಘದ ಅಧ್ಯಕ್ಷ ಶಿವರಾಮ ಎಂ.ಎಸ್. ಮೊದಲಾದವರು ವೇದಿಕೆಯಲ್ಲಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಕಂದಾಯ ನಿರೀಕ್ಷಕ ಅವಿನ್ ರಂಗತ್ಮಲೆ ಕಡಬದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದ ಬಗ್ಗೆ ಮಾಹಿತಿ ನೀಡಿದರು.

970×90