ಎಣ್ಮೂರು: ಕೋಟಿ ಚೆನ್ನಯರ ಸಮಾಧಿ ಸಮೀಪ ಹುತ್ತದಲ್ಲಿ ನಾಗನ ಹೆಡೆ!

ಎಣ್ಮೂರು: ಕೋಟಿ ಚೆನ್ನಯರ ಸಮಾಧಿ ಸಮೀಪ ಹುತ್ತದಲ್ಲಿ ನಾಗನ ಹೆಡೆ!

ಕಡಬ ಟೈಮ್ಸ್, ಎಣ್ಮೂರು: ಕಡಬ ತಾಲೂಕಿನ ಎಡಮಂಗಳ ಗ್ರಾಮದ  ಕೋಟಿ ಚೆನ್ನಯರ ಸಮಾಧಿ ಸಮೀಪದ ದಾರಿಯಲ್ಲಿ ಹುತ್ತದಲ್ಲಿ ನಾಗನ ಹೆಡೆ ಮೂಡಿ ಜನರಲ್ಲಿ ವಿಸ್ಮಯ ಮೂಡಿಸಿದೆ.

ಕೋಟಿ ಚೆನ್ನಯರ ಸಮಾಧಿ ಮತ್ತು  ಮಂಜಲ್ ಪಾದೆ ನಡುವಿನ ಕಾಲು ದಾರಿಯುದ್ದಕ್ಕೂ ಹಲವು ಹುತ್ತಗಳು ಕಾಣ ಸಿಗುತ್ತದೆ. ಹುತ್ತವೊಂದರಲ್ಲಿ ಮಣ್ಣಿನ ಗೋಪುರಗಳ ನಡುವೆ ನಾಗನ ಹೆಡೆಯನ್ನೇ ಹೋಲುವ ಆಕೃತಿ  ಸ್ವಾಭಾವಿಕವಾಗಿ ನಿರ್ಮಾಣವಾಗಿದೆ.

ಕೋಟಿ ಚೆನ್ನಯರು ಎಣ್ಮೂರು ಪರಿಸರದಲ್ಲಿ ಕ್ರಮಿಸಿದ ಪಥದಲ್ಲಿ ಪ್ರಕೃತಿ ವಿಸ್ಮಯ ಆಗಿರುವುದು ಇಂದಿಗೂ ತನ್ನ ಕಾರ್ನಿಕ ಮೆರೆಯುತ್ತಿರುವುದಕ್ಕೆ ನಿದರ್ಶನ ಎಂಬುದಾಗಿ ಗ್ರಾಮಸ್ಥರು ಬಣ್ಣಿಸುತ್ತಿದ್ದಾರೆ.

970×90