ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರಿಂದ ಮಹತ್ವದ ಎಚ್ಚರಿಕೆ

ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಅವರಿಂದ ಮಹತ್ವದ ಎಚ್ಚರಿಕೆ

ಕಡಬ ಟೈಮ್ಸ್, ಮುಖ್ಯಸುದ್ದಿ: ದ.ಕ ಜಿಲ್ಲಾಧಿಕಾರಿಗಳು ಗ್ಯಾರೆಜ್ ಗಳಿಗೆ ಅನುಮತಿ ನೀಡಿ ಆದೇಶ ಹೊರಡಿಸಿದ್ದು ನಿಗದಿ ಪಡಿಸಿದ ಸಮಯ ಮೀರಿ ಅಂಗಡಿ ತೆರೆದಿರುವುದು ಕಂಡು ಬಂದಲ್ಲಿ ಮುಲಾಜಿ ಇಲ್ಲದೆ ಕೇಸು ದಾಖಲಿಸಲಾಗುವುದು ಎಂದು ಕಡಬ ಠಾಣಾ ಎಸ್.ಐ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕಡಬ ವ್ಯಾಪ್ತಿಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ .ಅಗತ್ಯ ವಸ್ತು ಖರೀದಿಗೆ ವಿಧಿಸಿದ ಸಮಯದಲ್ಲಿ ಜನರು ಕೋವಿಡ್ ನಿಯಮ ಪಾಲಿಸಿಕೊಂಡು ವ್ಯವಹರಿಸಬೇಕು. ಇಲಾಖೆ ಜೊತೆ ಕೈಜೋಡಿಸಿ ಕೊರೋನಾ ಚೈನ್  ಬ್ರೇಕ್ ಗೆ ಪಣತೊಡಬೇಕು.

ಗ್ಯಾರೆಜ್ ಗಳು ತೆರೆದಿರುವುದರಿಂದ ವಾಹನ ದಟ್ಟಣೆ  ಹೆಚ್ಚಾಗುವ ಸಂಭವವಿದ್ದು ಜಿಲ್ಲಾಡಳಿತ ಮಾರ್ಗಸೂಚಿಯನ್ನು ಪಾಲಿಸಬೇಕು.  ಪೊಲೀಸ್ ಇಲಾಖೆ ಜನ ಸ್ನೇಹಿಯಾಗಿ ಕೆಲಸ ನಿರ್ವಹಿಸುತ್ತಿದೆ.  ನಿಯಮ ಉಲ್ಲಂಘಿಸುವವರ ವಿರುದ್ದ ಸರ್ಕಾರದ ನಿಯಮದಂತೆ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

970×90