ಕಡಬ:ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲು ಪಟ್ಟಣ ಪಂಚಾಯತ್ ನಲ್ಲಿ ಅನುದಾನವಿಲ್ಲ

ಕಡಬ:ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲು ಪಟ್ಟಣ ಪಂಚಾಯತ್ ನಲ್ಲಿ ಅನುದಾನವಿಲ್ಲ

ಕಡಬ ಟೈಮ್ಸ್,ಪಟ್ಟಣ ಸುದ್ದಿ: ಕಡಬ ಪಟ್ಟಣ ಪಂಚಾಯತ್ ವತಿಯಿಂದ ತೀರ ಸಂಕಷ್ಟ ಎದುರುರಿಸುತ್ತಿರುವ ಬಡ ಕುಟುಂಬಕ್ಕೆ ಆಹಾರಕಿಟ್ ನೀಡಬೇಕೆಂಬ ವಿಚಾರ ಚರ್ಚೆಯಾಗಿದೆ.

ಕೋಡಿಂಬಾಳ ಗ್ರಾಮದ ಓಂತ್ರಡ್ಕ ಶಾಲೆಯಲ್ಲಿ ಜೂನ್.೧೦ ರಂದು ಜರುಗಿದ ಪ.ಪಂ  ಕೊರೋನಾ ಕಾರ್ಯಪಡೆಯ ವಾರ್ಡ್  ಸಭೆಯಲ್ಲಿ ಈ ವಿಚಾರವನ್ನು ತಾ.ಪಂ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಪ್ರಸ್ತಾಪಿಸಿದ್ದಾರೆ.ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಕಿಟ್ ನೀಡುವ ಕಾರ್ಯ ನಡೆಯುತ್ತಿದೆ,ಪಟ್ಟಣ ಪಂಚಾಯತ್ ನಲ್ಲಿಯೂ ಬಡ ಕುಟುಂಬಗಳಿದ್ದು ಅವರಿಗೆ ಕಿಟ್ ಕೊಡುವ ವ್ಯವಸ್ಥೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ

ಈ ಸಂದರ್ಭ ಸಭೆಯಲ್ಲಿ ಹಾಜರಾಗಿದ್ದ ಪ.ಪಂ ಅಧಿಕಾರಿಗಳು ಕಿಟ್ ನೀಡಲು ಪಟ್ಟಣ ಪಂಚಾಯತ್ ನಲ್ಲಿ ಅನುದಾನವಿಲ್ಲ. ದಾನಿಗಳು ನೆರವು ನೀಡಿದಲ್ಲಿ ವ್ಯವಸ್ಥೆ ಮಾಡಬಹುದು ಎಂದರು. ಇದಕ್ಕೆ ಪೂರಕವಾಗಿ ಉತ್ತರಿಸಿದ ತಹಶೀಲ್ದಾರ್ ಅನಂತ್ ಶಂಕರ್ ಅವರು ಗ್ರಾ.ಪಂ ಗೆ ವಿಶೇಷ ೫೦ ಸಾವಿನ ಅನುದಾನ ಬಂದಿದೆ, ಅಲ್ಲದೆ ೧೪ ನೇ ಹಣಕಾಸು ಯೋಜನೆಯಡಿ ನಿರ್ವಹಿಸಲು ಅವಕಾಶವಿದೆ ಹೀಗಾಗಿ ಗ್ರಾ,.ಪಂ ವ್ಯಾಪ್ತಿಯಲ್ಲಿ ಆಹಾರ ಕಿಟ್ ನೀಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಫಝಲ್ ಅವರು ಪ.ಪಂ ನವರು ಕಿಟ್ ಕೊಡಬಾರದೆಂಬ ಯಾವ ನಿಯಮವೂ ಇಲ್ಲ, ಇಂತಹ ಕಷ್ಟ ಕಾಲದಲ್ಲಿ ಜನರಿಗೆ ಕಿಟ್ ನೀಡದಿದ್ದರೆ ಹೇಗೆ?, ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದರು.

970×90