ಆಲಂಕಾರು: ಸಚಿವ ಅಂಗಾರರ  ಮಾಜಿ ಆಪ್ತ ಸಹಾಯಕ ನಿಧನ

ಆಲಂಕಾರು: ಸಚಿವ ಅಂಗಾರರ  ಮಾಜಿ ಆಪ್ತ ಸಹಾಯಕ ನಿಧನ

ಕಡಬ ಟೈಮ್ಸ್, ಆಲಂಕಾರು :  ಸಚಿವ ಎಸ್. ಅಂಗಾರರವರ ಮಾಜಿ ಆಪ್ತ ಸಹಾಯಕ ಕೊಯಿಲ ಗ್ರಾಮದ ಆತೂರುಬೈಲ್ ನಿವಾಸಿ ಮಂಚ ಮುಗೇರ ಎಂಬವರ ಪುತ್ರ ಕೊರಗಪ್ಪ (53 ವ.) ರವರು  ಅನಾರೋಗ್ಯದಿಂದ ಜೂ. 9ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕೊರಗಪ್ಪರವರು  ದಲಿತ ಸ೦ಘರ್ಷ ಸಮಿತಿಯಲ್ಲಿ ಸಕ್ರೀಯರಾಗಿ ತೊಡಗಿಕೊಂಡು  ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡಿದ್ದರು.  ಆ ಬಳಿಕ ಬಿಜೆಪಿಯಲ್ಲಿ ಸಕ್ರೀಯರಾಗಿದ್ದ ಅವರು  ಎಸ್. ಅ೦ಗಾರರು  ಶಾಸಕರಾಗಿದ್ದ 3 ಅವಧಿಯಲ್ಲಿ  ಅವರ ಖಾಸಗಿ ಆಪ್ತ ಸಹಾಯಕರಾಗಿ ಕೆಲಸ ನಿರ್ವಹಿಸಿದ್ದರು.

ನಂತರದ ದಿನಗಳಲ್ಲಿ  ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡು ಕಳೆದ ಸಾಲಿನ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಬಿ. ರಘು ಅವರೊಂದಿಗೆ ಕೆಲಸ ಮಾಡಿದ್ದರು.ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ  ಡಾ. ರಘುರವರು ಪುತ್ತೂರು ಆಸ್ಪತ್ರೆಗೆ ಭೇಟಿ ನೀಡಿದಲ್ಲದೆ ಮನೆಗೆ ಬಂದು ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ ತುರ್ತು ಸಹಾಯ ನೀಡಿ ಸಹಕರಿಸಿದರು. ಕೊರಗಪ್ಪರವರು ಪತ್ನಿ ವಿನೋದವನ್ನು ಅಗಲಿದ್ದಾರೆ.

970×90