ಕೊಂಬಾರು: ಗ್ರಾಮಸ್ಥರ ಜೀವನ ಕ್ರಮ, ಕೊರೊನಾ ವಾರಿಯರ್ಸ್ ಗಳ ಸಮಯೋಚಿತ ನಿರ್ಧಾರದಿಂದ ಸಿರಿಬಾಗಿಲು ಗ್ರಾಮ ಸುರಕ್ಷಿತ

ಕೊಂಬಾರು: ಗ್ರಾಮಸ್ಥರ ಜೀವನ ಕ್ರಮ, ಕೊರೊನಾ ವಾರಿಯರ್ಸ್ ಗಳ ಸಮಯೋಚಿತ ನಿರ್ಧಾರದಿಂದ ಸಿರಿಬಾಗಿಲು ಗ್ರಾಮ ಸುರಕ್ಷಿತ

ಕಡಬ ಟೈಮ್ಸ್, ಕೊಂಬಾರು: ಕೊರೋನಾ ಎರಡನೇ ಅಲೆಗೆ ಜಿಲ್ಲೆಯ ಹಲವೆಡೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.ಆದರೆ ನಕ್ಸಲ್ ಪೀಡಿತ ಪ್ರದೇಶಕ್ಕೆ ಒಳಪಟ್ಟಿದ್ದ ಕೊಂಬಾರಿನ ಸಿರಿಬಾಗಿಲು ಗ್ರಾಮದಲ್ಲಿ ಯಾವುದೇ ಪಾಸಿಟಿವ್ ಕೇಸ್ ದಾಖಲಾಗದೆ ಜಿಲ್ಲೆಯಲ್ಲಿ ಈ ಗ್ರಾಮ ಸುದ್ದಿಯಾಗುತ್ತಿದೆ.

ಕಡಬ ತಾಲೂಕಿನ 42 ಗ್ರಾಮಗಳ ಪೈಕಿ ಕೊಂಬಾರು ಗ್ರಾಮ ಪಂಚಾಯಿತಿಗೆ ಒಳಪಡುವ ಸುಮಾರು 7561ಎಕ್ರೆ ವಿಸ್ತೀರ್ಣ ಹೊಂದಿರುವ ಸಿರಿಬಾಗಿಲು ಗ್ರಾಮದಲ್ಲಿ 165 ಕುಟುಂಬಗಳು ಮತ್ತು ಸುಮಾರು 872 ಜನಸಂಖ್ಯೆಯನ್ನು ಹೊಂದಿದೆ ಈ ಗ್ರಾಮ ಬೌಗೋಳಿಕವಾಗಿಯೂ ತನ್ನದೆ ಪ್ರಾಕೃತಿಕ ಸೌಂದರ್ಯ ಹೊಂದಿದೆ. ಕೊರೋನಾ ಕಾರ್ಯಪಡೆಯ ಸಾಮೂಹಿಕ ಪ್ರಯತ್ನದಿಂದ ಗ್ರಾಮದ ಜನರು ಆರೋಗ್ಯದಿಂದ ಜೀವನ ನಡೆಸುವಂತಾಗಿದೆ.

ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ ಎಂದ ಮಾತ್ರಕ್ಕೆ ಈ ಗ್ರಾಮದ ಜನತೆ ಹೊರಗಡೆ ಪಟ್ಟಣಗಳನ್ನು ಆಶ್ರಯಿಸಿಲ್ಲ ಎಂದು ಅರ್ಥವಲ್ಲ. ಇವರು ತಮ್ಮ ದೈನಂದಿನ ಅಗತ್ಯಗಳಿಗೆ, ಆಸ್ಪತ್ರೆಯ ಸೇವೆಗಳಿಗೆ ಪಟ್ಟಣ ಪ್ರದೇಶಗಳನ್ನೇ ಆಶ್ರಯಿಸಿದ್ದಾರೆ. ಗ್ರಾಮದ ಪಂಚಾಯತ್ ವ್ಯಾಪ್ತಿಯ ಕೊಂಬಾರು ಪ್ರದೇಶದಲ್ಲಿ ಹಲವರಿಗೆ ಕೊರೊನಾ ಸೋಂಕು ತಗುಲಿದ್ದರೂ ಸಿರಿಬಾಗಿಲು ವ್ಯಾಪ್ತಿಯಲ್ಲಿ ಇಲ್ಲ. ಈ ಗ್ರಾಮದ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ, ಜನರ ಮುನ್ನೆಚ್ಚರಿಕೆಯುಕ್ತ ಜೀವನ ಶೈಲಿ ಹಾಗೂ ಸ್ಥಳೀಯ ಕೊರೊನಾ ವಾರಿಯರ್ಸ್ ಗಳ ಸಮಯೋಚಿತವಾದ ನಿಲುವಿನಿಂದ ಗ್ರಾಮ ಸುರಕ್ಷಿತವಾಗಿದೆ

ಒಟ್ಟಿನಲ್ಲಿ ಈ ಗ್ರಾಮದ ಜನತೆಯ ಜೀವನಶೈಲಿ ಮತ್ತು ಕೊರೋನಾ ಕಾರ್ಯ ಪಡೆಯ ಸೂತ್ರಗಳನ್ನು ಇತರ ಗ್ರಾಮಗಳ ಹಾಗೂ ದೇಶದ ಜನತೆ ಪಾಲಿಸಿದಲ್ಲಿ ಕಡಬ ತಾಲೂಕು ಕೊರೋನಾ ಮುಕ್ತವಾಗಲಿದೆ. ಎಂಬ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬಂದಿದೆ.

970×90