ಈ ಮಾಸ್ಕನ್ನು ಎಸೆದರೆ ಸಸಿ ಹುಟ್ಟುತ್ತೆ:ಪರಿಸರ ಸ್ನೇಹಿ ಮಾಸ್ಕ್ ತಯಾರಿದ ತುಳುನಾಡಿನ ಸಾಧಕ ಇವರು

ಈ ಮಾಸ್ಕನ್ನು ಎಸೆದರೆ ಸಸಿ ಹುಟ್ಟುತ್ತೆ:ಪರಿಸರ ಸ್ನೇಹಿ ಮಾಸ್ಕ್ ತಯಾರಿದ ತುಳುನಾಡಿನ ಸಾಧಕ ಇವರು

ಕಡಬ ಟೈಮ್ಸ್, ವಿಶೇಷ ಸುದ್ದಿ: ಮಂಗಳೂರಿನ ಯುವಕನೊಬ್ಬ ಪರಿಸರಸ್ನೇಹಿ ಮಾಸ್ಕ್ ತಯಾರಿಸಿದ್ದು  ಅಮೆರಿಕದ ಮಾಧ್ಯಮಗಳು ಯುವಕ ಮಾಹಿತಿಗಾಗಿ  ಹುಡುಕಾಡುತ್ತಿವೆ. ಹುಡುಗನ ಪೂರ್ವಾಪರ ತಿಳಿಯುವುದಕ್ಕೆ ಬೆನ್ನು ಬಿದ್ದಿವೆ.

ಅದಕ್ಕೆ ಕಾರಣ  ಪಕ್ಷಿಕೆರೆಯ  ನಿತಿನ್ ವಾಸ್ ಎಂಬ ಯುವಕ  ತಯಾರಿಸಿದ ಪರಿಸರ ಪೂರಕ ಮಾಸ್ಕ್,.  ಹುಡುಗನ ಸಾಧನೆಗೆ  ಅಮೆರಿಕದ ಮಾಧ್ಯಮಗಳು ಸಂದರ್ಶನ ಹಾಗೂ ಬರಹದ ಮೂಲಕ ಬೆಂಬಲ ನೀಡಿವೆ.

ಕಾಟನ್ ಬಟ್ಟೆಯನ್ನು ಪಲ್ಸ್ ಮಾಡಿಕೊಂಡು ಇದರ ಮೂಲಕ ಮಾಡಲಾಗುತ್ತದೆ. ಕಾಟನ್ ಕಾಟನ್ ಬಟ್ಟೆಯ ಲೇಯರ್ ಮಾಡಿದ ಬಳಿಕ ಅದನ್ನು ಮಾಸ್ಟ್ ರೂಪದಲ್ಲಿ ತಯಾರಿಸಲಾಗುತ್ತದೆ. ಕಾಟನ್ ಶೀಟ್ನಲ್ಲಿ ತುಳಸಿ ಸೇರಿದಂತೆ ಹತ್ತಾರು ಔಷಧಿ ಯ ಹಾಗೂ ತರಕಾರಿ ಗಿಡಗಳ ಬೀಜಗಳನ್ನು ಇಡಲಾಗುತ್ತದೆ.

ಈ ಮಾಸ್ಕನ್ನು ಬಿಸಾಡಿದರೂ ಅದರಿಂದ ಪರಿಸರಕ್ಕೆ ಹಾನಿ ಇಲ್ಲ. ಬಿದ್ದ ಜಾಗದಲ್ಲಿ ಈ ಬೀಜಗಳು ಗಿಡವಾಗಿ ಹೊರ ಬರುತ್ತವೆ. ಇದೇ ಐಡಿಯಾ ಬಳಸಿಕೊಂಡು ನಿತಿನ್ ವಾಸ್ ಮಾಸ್ಕ್ ಗಳನ್ನು ತಯಾರಿಸಿದ್ದರು ಈಗಾಗಲೇ ಅದನ್ನು ಮಾರುಕಟ್ಟೆಗೆ ಬಿಡಲಾಗಿದೆ.

ಈ ಮಾಹಿತಿ ಆಧರಿಸಿ ಅಮೆರಿಕದ ಎಬಿಸಿ(ಅಮೆರಿಕನ್ ಕಂಪನಿ)ಯವರು ನೀತಿನ್ ಜತೆ ವರ್ಚುಯಲ್ ಸಂದರ್ಶನ ಮಾಡಿದೆ. ಟಿವಿ ಜತೆಯಲ್ಲಿ ವೆಬ್ಸೈಟ್ ನಲ್ಲೂ  ಪ್ರಕಟಿಸಿವೆ. ಯುನೈಟೆಡ್ ನೇಶನ್ಸ್ ಎನ್ವಿರಾನ್ಮೆಂಟ್ ಪ್ರೊಟೆಕ್ಷನ್ನ ಮಾಜಿ ನಿರ್ದೇಶಕ ಸೇವಿನ್ ವಿ. ವಿಟಿಡಲ್ ಟ್ವಿಟರ್ನಲ್ಲೂರೀ-ಟ್ವಿಟ್ ಮಾಡಿ ಶ್ಲಾಘಿಸಿದ್ದಾರೆ. ಇದರ ಜತೆಯಲ್ಲಿ ದಕ್ಷಿಣ ಆಫ್ರಿಕಾ ‘ಅವರ್ ಮನಿ’ಯಲ್ಲೂ ಸಂದರ್ಶನ ಫಿಕ್ಸ್ ಎರಡು ದಿನಗಳಲ್ಲಿ ಪ್ರಸಾರ ಮಾಡಲಿದೆ.

970×90