ಮಂಜುನಾಥ ದೇವರ ದರ್ಶನ ಪಡೆದ ಸಚಿವ ಲಿಂಬಾವಳಿ: ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ

ಮಂಜುನಾಥ ದೇವರ ದರ್ಶನ ಪಡೆದ ಸಚಿವ ಲಿಂಬಾವಳಿ: ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ

ಕಡಬ ಟೈಮ್ಸ್,ಧರ್ಮಸ್ಥಳ :ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿರುವ ಸಚಿವ ಲಿಂಬಾವಳಿಯ ಪೋಟೊಗಳನ್ನು  ಶಾಸಕ ಹರೀಶ್ ಪೂಂಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಜನರಿಂದ ಟೀಕೆ ವ್ಯಕ್ತವಾಗಿದೆ.

ಜನ ಸಾಮಾನ್ಯರಿಗೊಂದು ಕಾನೂನು, ರಾಜಕಾರಣಿಗಳಿಗೆ ಒಂದು ಕಾನೂನು ಎಂದು ಕಾಮೆಂಟ್  ಹಾಕಿ ಈ ಕೋವಿಡ್ ಸಂದರ್ಭದಲ್ಲಿ ದೇವರ ದರ್ಶನ ನಡೆದಿರುವುದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಲಾಕ್’ಡೌನ್ ನಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶವಿಲ್ಲದಿದ್ದರೂ ಸಚಿವರು ಹೇಗೆ ದರ್ಶನ ಪಡೆದರು. ಯಾಕೆ ಈ ರೀತಿಯ ತಾರತಮ್ಯಯೆಂಬುವುದು ಜನರ ಪ್ರಶ್ನೆಯಾಗಿದೆ.

ಸಚಿವ  ಅರವಿಂದ ಲಿಂಬಾವಳಿಯವರು  ಕೋವಿಡ್ ನಿಯಮಾವಳಿಯ ಪ್ರಕಾರ ದೇವಳದ ಹೊರಗಿನಿಂದಲೆ ಶ್ರೀ ಮಂಜುನಾಥ ದೇವರ ದರ್ಶನ ಪಡೆದು ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು.

970×90