ಕಡಬ: ಲಸಿಕೆ ಪಡೆಯಲು ಆಸ್ಪತ್ರೆ ಮುಂಭಾಗ ಜನಜಾತ್ರೆ

ಕಡಬ: ಲಸಿಕೆ ಪಡೆಯಲು  ಆಸ್ಪತ್ರೆ ಮುಂಭಾಗ ಜನಜಾತ್ರೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ:ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನ ಸಾಮಾನ್ಯರಿಗೆ ತಿಳುವಳಿಕೆ ನೀಡಲು ಸಿಬ್ಬಂದಿಗಳು ಇಲ್ಲದ ಕಾರಣ ಇಂದು  ಆಸ್ಪತ್ರೆ ಮುಂಭಾಗ ಜನಜಾತ್ರೆ ಕಂಡು ಬಂದಿದೆ.

ವಿವಿಧ ಗ್ರಾಮಗಳಿಂದ ಕೊರೋನಾ ವ್ಯಾಕ್ಸಿನ್ ಪಡೆಯಲು ಜನರು ವಾಹನ ಬಾಡಿಗೆ ಮಾಡಿಕೊಂಡು ಬಂದಿದ್ದು ಆಸ್ಪತ್ರೆ ಮುಂಭಾಗ ಜಾಗವಿಲ್ಲದೆ ಪಕ್ಕದ ಕಟ್ಟಡದ ಸಮೀಪ ಬಿಸಿಲಿನಲ್ಲಿಯೇ ಜನ ಕಾಯುತ್ತಿದ್ದರು.

 

ಸೀಮಿತ ಸಿಬ್ಬಂದಿಗಳಿರುವ ಕಾರಣ ಆಸ್ಪತ್ರೆಯ ಒಳಭಾಗದಲ್ಲಿ ಜನರಿಗೆ ಲಸಿಕೆ ನೀಡಲು ಸಿಬ್ಬಂದಿಗಳು ಕಾರ್ಯನಿರರಾಗಿದ್ದರು.ಇಂದು ಲಸಿಕೆಪಡೆಯಲು ೨೦೦ ಟೋಕನ್ ನೀಡಿದ್ದು ಕೆಲವರು ಟೋಕನ್ ಸಿಗದೆ ,ಸಮರ್ಪಕ ಮಾಹಿತಿಯೂ ಸಿಗದೆ ಒದ್ದಾಡುತ್ತಿರುವುದು ಕಂಡು ಬಂತು. ಸಾಮಾಜಿಕ ಅಂತರವನ್ನು ಮರೆತು ಲಸಿಕೆ ಸಿಗಬಹುದೆಂಬ ಆಶಾಭಾವದಿಂದ ಸಿಬ್ಬಂದಿಗಳನ್ನೇ ಜನ ಹುಡುಕುತಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಚಿತ್ರ ರಾವ್ ಅವರು ನಾವು ಇನ್ನೂರು ಮಂದಿಗೆ ಟೋಕನ್ ವ್ಯವಸ್ಥೆ ಮಾಡಿದ್ದೇವೆ. ಕೆಲವರು ಸಮರ್ಪಕ ಮಾಹಿತಿ ಇಲ್ಲದೆ ಆಸ್ಪತ್ರೆಗೆ ಆಗಮಿಸಿದ್ದು ಇಲಾಖೆಯ ನಿಯಾಮಾನುಸಾರ ಎಲ್ಲರಿಗೂ ಲಸಿಕೆ ಪಡೆಯಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.

970×90