ಬೆಳ್ಳಾರೆ: ಪೈಚಾರಿನಲ್ಲಿ ಅತ್ತೆಗೆ ಬಿಸಿನೀರು ಎರಚಿದ ಸೊಸೆ

ಬೆಳ್ಳಾರೆ: ಪೈಚಾರಿನಲ್ಲಿ ಅತ್ತೆಗೆ ಬಿಸಿನೀರು ಎರಚಿದ ಸೊಸೆ

ಕಡಬ ಟೈಮ್ಸ್, ಸುಳ್ಯ: ಮಕ್ಕಳಿಗೆ ಮಾವಿನ ಹಣ್ಣು ಕೊಯ್ದುಕೊಟ್ಟ ನೆಪಕ್ಕೆ ಕೋಪಗೊಂಡು ಸೊಸೆ ತನ್ನ ಅತ್ತೆಗೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ ಅಮಾನವೀಯ ಘಟನೆ ಮೆ.26 ರಂದು ಸುಳ್ಯದ ಹೊರವಲಯ ಪೈಚಾರ್ ನಲ್ಲಿ ನಡೆದಿದೆ.

ಪೈಚಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪತ್ನಿ ಮೈಮೂನ ಈ ಅಮಾನವೀಯ ಕೃತ್ಯ ಎಸಗಿದವರು. ಇಸ್ಮಾಯಿಲ್ ರವರ ತಾಯಿ ಮೇಲೆ ಬಿಸಿನೀರಿಗೆ ಮೆಣಸಿನ ಹುಡಿ ಬೆರೆಸಿ ಎರಚಿದ್ದು ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೇ 26 ರಂದು ತನ್ನ ಮೊಮ್ಮಕ್ಕಳು ಅಂದರೆ ಅಬ್ದುಲ್ ರವರ ಮಕ್ಕಳಿಗೆ ಮಾವಿನ ಹಣ್ಣು ಕೊಯ್ದು ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು ಮೈಮೂನ ಅವರು ಮೆಣಸಿನ ಪುಡಿಯುಕ್ತ ಬಿಸಿ ನೀರನ್ನು ತನ್ನ ಅತ್ತೆಯ ಮೇಲೆಯೇ ಎರಚಿದ್ದಾರೆ ಎಂದು ಆರೋಪಿಸಲಾಗಿದೆ.

970×90