ಗುತ್ತಿಗಾರು:  ಕೊಳವೆ ಬಾಕಿ ಕೊರೆಯಲು ಮುಂದಾದ ಗ್ರಾ.ಪಂ:ಸ್ಥಳೀಯರ ವಿರೋಧ 

ಗುತ್ತಿಗಾರು:  ಕೊಳವೆ ಬಾಕಿ ಕೊರೆಯಲು ಮುಂದಾದ ಗ್ರಾ.ಪಂ:ಸ್ಥಳೀಯರ ವಿರೋಧ 

ಕಡಬ ಟೈಮ್ಸ್, ಗುತ್ತಿಗಾರು: ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ  ಬಳ್ಳಕ್ಕ ಎಂಬಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದು ಸ್ಥಳೀಯರು ವಿರೋಧ ವ್ಯಕ್ತ ಪಡಿಸಿದ್ದಾರೆ.

 

ಎಸ್ಸಿ  ಕುಟುಂಬವೊಂದು ಪಂಚಾಯತ್ ಗೆ ಬೇಡಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಗ್ರಾ.ಪಂ ಎಸ್.ಟಿ ಕುಟುಂಬಿಕರ ಜಾಗದ ಸಮೀಪ ಕೊಳವೆ ಬಾವಿ ಕೊರೆಯಲು ಮುಂದಾಗಿದ್ದು  ಸ್ಥಳೀಯ ಎಸ್.ಟಿ. ಕುಟುಂಬಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ವಿರೋಧವಿದ್ದರೂ ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ ಬೋರ್ ಕೊರೆಯಲು ಮುಂದಾದ ವೇಳೆ  ಸ್ಥಳೀಯರು ಸುಬ್ರಹ್ಮಣ್ಯ  ಪೋಲಿಸ್ ಠಾಣೆಗೆ ಮತ್ತು ಅಧಿಕಾರಿಗಳಿಗೆ ದೂರು ನೀಡಿದ್ದರು. ಇದರಿಂದಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ,  ಪಂಚಾಯತ್ ಸದಸ್ಯರು ಮತ್ತು ಪಿ.ಡಿ.ಒ.ರವರು ಸ್ಥಳ ತನಿಖೆಗೆ ಬಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯವರು ಇದೇ ಜಾಗದಲ್ಲಿ‌ ಕೊಳವೆ ಬಾವಿ ಕೊರೆಯಿರಿ ಎಂದು ಸೂಚಿಸಿದರೆನ್ನಲಾಗಿದೆ.

ಮೇ. 25ರಂದು ಸ್ಥಳೀಯರು ಡಿ.ಸಿ.ಯವರಿಗೆ ದೂರು ಸಲ್ಲಿಸಿದ್ದರು. ಆದರೆ ಮೇ. 26ರಂದು ಬೆಳ್ಳಂಬೆಳಗ್ಗೆ ಸ್ಥಳೀಯರ ವಿರೋಧದ ನಡುವೆಯೇ ಕೊಳವೆಬಾವಿ ಕೊರೆಯುವ ಯಂತ್ರ ಆಗಮಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪಂಚಾಯತ್ ನ ಸ್ಥಳೀಯ ವಾರ್ಡ್ ಸದಸ್ಯರು ಆ ಜಾಗದಲ್ಲಿ ಬೋರ್ ಕೊರೆಯುವುದು ಬೇಡವೆಂದು ತಿಳಿಸಿದ್ದರೂ, ಬೇರೆ ವಾರ್ಡಿನ ಸದಸ್ಯರು ಬಂದು ಹಠದಿಂದ ಕೊಳವೆ ಬಾವಿ ಕೊರೆಯಲು ಬಂದಿರುವುದಾಗಿ ಆರೋಪಿಸಿರುವ ಸ್ಥಳೀಯರು ಬೋರ್ ಲಾರಿಯ ಮುಂದೆ ಪ್ರತಿಭಟಿಸುತ್ತಿದ್ದಾರೆ.

 

970×90