ಮಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್ ಯಾಕೆ ಮಾಡಬೇಕು?

ಮಕ್ಕಳಿಗೆ ಎಣ್ಣೆ ಹಚ್ಚಿ ಮಸಾಜ್ ಯಾಕೆ ಮಾಡಬೇಕು?

ಕಡಬ ಟೈಮ್ಸ್, ಮಾಹಿತಿ:  ಚಿಕ್ಕ ಮಕ್ಕಳಿಗೆ  ಮೈಯೆಲ್ಲಾ ಎಣ್ಣೆ ಹಚ್ಚಿ ಮಸಾಜ್ ಮಾಡಿ ನಂತರ ಕಾಲ ಮೇಲೆ ಹಾಕಿ ಬಿಸಿ ಬಿಸಿ ನೀರು ಸುರಿದು ಸ್ನಾನ ಮಾಡಿಸುವ ಖುಷಿಯನ್ನು ನಾವು ಎಲ್ಲರೂ ಅನುಭವಿಸಿರುತ್ತೇವೆ.

ಮಕ್ಕಳಿಗೆ ಮಸಾಜ್ ಮಾಡುವುದರಿಂದ ಹಲವು ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ.

ನಿದ್ರೆ:  ಮಸಾಜ್ ಮಾಡುವುದರಿಂದ ಮಗುವಿಗೆ ಸ್ನಾನವಾದ ನಂತರ ಒಳ್ಳೆಯ ನಿದ್ರೆ ಬರುತ್ತದೆ. ಚಿಕ್ಕ ಮಕ್ಕಳಿಗೆ ನಿದ್ರೆ ತುಂಬಾ ಮುಖ್ಯ.  ಯಾಕೆಂದರೆ ಅವರ ಬೆಳವಣಿಗೆ ನಡೆಯುವುದೇ ನಿದ್ರೆಯ ಸಮಯದಲ್ಲಿ.  ಹಾಗಾಗಿ ಸುಖ ನಿದ್ರೆ ಅವರ ಆರೋಗ್ಯದ ಗುಟ್ಟು.

ಜೀರ್ಣಕ್ರಿಯೆ: ನಿರ್ದಿಷ್ಟ ಕ್ರಮದಲ್ಲಿ ಮಸಾಜ್ ಮಾಡುವುದರಿಂದ ರಕ್ತ ಸಂಚಾರಕ್ಕೆ ಅನುಕೂಲವಾಗುವುದಲ್ಲದೆ  ಜೀರ್ಣಕ್ರಿಯೆಯೂ ಸುಗಮವಾಗುತ್ತದೆ. ಇನ್ನೂ ಎದ್ದು ಕೂರಲು ಬಾರದ ಮಗುವಿಗೆ ಜೀರ್ಣಕ್ರಿಯೆ ಸುಗಮವಾಗಬೇಕಾದರೆ ಮಸಾಜ್ ಮುಖ್ಯ ಆಗಿದೆ

ಭಾವನಾತ್ಮಕ ನಂಟು :  ಚಿಕ್ಕವರಿದ್ದಾಗ ನಮಗೆ ಎಣ್ಣೆ ಮಸಾಜ್  ಮಾಡಿದ ಕೈಗಳನ್ನು ನಾವು ದೊಡ್ಡವರಾದ ಮೇಲೂ ಮರೆಯಲ್ಲ. ಇದರಿಂದ  ಭಾವನಾತ್ಮಕ ನಂಟು ಬೆಳೆಯುತ್ತದೆ. ಅಮ್ಮನ ಬೆಚ್ಚಗಿನ ಕೈಯಿಂದ ಮಸಾಜ್ ಮಾಡುತ್ತಿದ್ದರೆ, ಮಗುವಿಗೆ ಸುರಕ್ಷಿತ ಭಾವನೆ ಉಂಟಾಗುತ್ತದೆ.

970×90