Video News:ಕಡಬ ಪೇಟೆಯಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್: ಕೆಲ ಹೊತ್ತು ವಾಹನ ದಟ್ಟಣೆ

Video News:ಕಡಬ ಪೇಟೆಯಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್: ಕೆಲ ಹೊತ್ತು ವಾಹನ ದಟ್ಟಣೆ

ಕಡಬ ಟೈಮ್ಸ್, ಪಟ್ಟಣ ಸುದ್ದಿ :ಕೊರೊನಾ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​ಡೌನ್ ಜಾರಿ ಮಾಡಿದೆ. ಅನಗತ್ಯ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ಠಾಣಾ ಮುಂಭಾಗ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು.ಈ ಹೆಚ್ಚುವರಿಯಾಗಿ ಸೈಂಟ್ ಜೋಕಿಮ್ಸ್ ಶಾಲಾ ಬಳಿ ಇನ್ನೊಂದು ಚೆಕ್ ಪೋಸ್ಟ್ ನಿರ್ಮಿಸಲಾಗಿದೆ.

ಕಡಬ ಠಾಣಾ ಪೊಲೀಸರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು ವಾಹನಗಳನ್ನು ತಪಾಸಣೆ ನಡೆಸಿಯೇ ಮುಂದಕ್ಕೆ ಬಿಡುತ್ತಿದ್ದಾರೆ.ಸುಬ್ರಹ್ಮಣ್ಯ ರಸ್ತೆಯಲ್ಲಿ ಹಾಕಲಾಗಿದ್ದ ಚೆಕ್ ಪೋಸ್ಟ್ ನಿಂದಾಗಿ  ಮುಂಜಾನೆ ಕೆಲ ಕಾಲ ವಾಹನ ದಟ್ಟಣೆ ಕಂಡು ಬಂತು.

ಪೊಲೀಸರು ನಿರ್ಮಿಸಿದ  ಈ ಹೆಚ್ಚುವರಿ   ಚೆಕ್ ಪೋಸ್ಟ್  ಈಗ ಸಾರ್ವಜನಿಕರು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಈ ಪೆಟ್ರೋಲ್ ಗೆ ೧೦೦ ರೂಪಾಯಿ ಇರುವ ಕಾಲದಲ್ಲಿ ಯಾರಾದರೂ  ಅನಗತ್ಯವಾಗಿ ಸಂಚರಿಸುತ್ತಾರೆಯೇ ?ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ವಾಹನದಟ್ಟಣೆಯ ವೀಡಿಯೋ ವನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಚರ್ಚಿಸುತ್ತಿದ್ದಾರೆ.

970×90