ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ:  ಬಾಕ್ಸ್ ನಲ್ಲಿ ರಾಶಿ ಮದ್ಯದ  ಪ್ಯಾಕೆಟ್  ಸಿಕ್ತು!

ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ:  ಬಾಕ್ಸ್ ನಲ್ಲಿ ರಾಶಿ ಮದ್ಯದ  ಪ್ಯಾಕೆಟ್  ಸಿಕ್ತು!

ಕಡಬ ಟೈಮ್ಸ್, ಸುಬ್ರಹ್ಮಣ್ಯ : ಬೈಕೊಂದು ಸ್ಕಿಡ್ ಆಗಿ ಬಿದ್ದ ವೇಳೆ ಸವಾರ ಕೊಂಡೊಯ್ಯುತ್ತಿದ್ದ ಮದ್ಯದ ಪ್ಯಾಕೆಟ್ ಗಳು ರಾಶಿಯಾಗಿ ರಸ್ತೆಗೆ ಬಿದ್ದಿದೆ.

ಕೊಲ್ಲಮೊಗ್ರದ ನಿಲ್ಕೂರು ಬಳಿ ಮೇ ೨೧ ರಂದು ಬೆಳಿಗ್ಗೆ ಬೈಕೊಂದು ಪಲ್ಟಿಯಾಗಿ ಸವಾರ ಬಿದ್ದು ಗಾಯಗೊಂಡಿದ್ದರು. ಈ ವೇಳೆ   ಬೈಕಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕೆಟ್ ಒಯ್ಯುತ್ತಿದ್ದುದು ಕಂಡುಬಂದಿದೆ.

ಬೈಕಿನ ಬಾಕ್ಸ್ ನಲ್ಲಿ ಮತ್ತು ಬ್ಯಾಗ್ ನಲ್ಲಿ ಮದ್ಯದ ಹಲವು   ಪ್ಯಾಕೆಟ್ ಗಳು ಇದ್ದುದು ಕಂಡುಬಂತು. ಸ್ಥಳಕ್ಕೆ ಬಂದ ಪಂಚಾಯತ್ ಸದಸ್ಯರೊಬ್ಬರು  ಸವಾರನನ್ನು ಅಲ್ಲೇ ನಿಲ್ಲಿಸಿ ಅಬಕಾರಿ ಪೋಲೀಸರಿಗೆ ತಿಳಿಸಿದರೆಂದು ತಿಳಿದು ಬಂದಿದೆ.

970×90