ಕರಾಯದಲ್ಲಿ ಮನೆಯೊಂದರಿಂದ ಚಿನ್ನ,ಹಣ ಕದ್ದೊಯ್ದ ಕಳ್ಳರು

ಕರಾಯದಲ್ಲಿ ಮನೆಯೊಂದರಿಂದ ಚಿನ್ನ,ಹಣ ಕದ್ದೊಯ್ದ ಕಳ್ಳರು

ಕಡಬ ಟೈಮ್ಸ್, ಉಪ್ಪಿನಂಗಡಿ:  ಇಲ್ಲಿನ ಕರಾಯ ಗ್ರಾಮದ ಮುರಿಯಾಳ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು  ಚಿನ್ನ ಹಾಗೂ ನಗದು ಕಳವುಗೈದು ಪರಾರಿಯಾದ  ಘಟನೆ ಬೆಳಕಿಗೆ ಬಂದಿದೆ.

ಮನೆ ಮಾಲಕಿ ಶಾಹಿದಾ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು,  ಶಾಹಿದಾ ಕಳೆದ ನಾಲ್ಕು ದಿನಗಳ ಹಿಂದೆ ಹಬ್ಬದ ಹಿನ್ನಲೆಯಲ್ಲಿ ತಮ್ಮ ತವರು ಮನೆಗೆ ಹೋಗಿದ್ದರು. ಆದರೆ ಮೇ.17ರಂದು ಸ್ವಗೃಹಕ್ಕೆ ಹಿಂದಿರುಗಿದ್ದು, ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಪುತ್ತೂರು ಡಿವೈಎಸ್ ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಬೀರುವಿನಲ್ಲಿದ್ದ 40ಗ್ರಾಂ ಚಿನ್ನದ ಸರ, ಅರ್ಧ ಪವನಿನ ಉಂಗುರ ಹಾಗೂ 4 ಸಾವಿರ ರೂ.ನಗದು ನಗದು ಕಳವು ಆಗಿರುವುದು ತಿಳಿದು ಬಂದಿದೆ.ಶಾಹಿದಾರವರ ಪತಿ ಕೆ.ಎಂ.ಮಹಮ್ಮದ್ ಅಶ್ರಫ್ ಬೆಂಗಳೂರುನಲ್ಲಿ ಉದ್ಯೋಗದಲ್ಲಿದ್ದು,  ಶಾಹಿದಾ ತಮ್ಮ 11 ವರ್ಷ ಮಗ ಮತ್ತು ಪತಿಯ ತಂದೆ ಜೊತೆ ಮುರಿಯಾಳದಲ್ಲಿ ವಾಸವಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಎಎಸೈ ಜನಾರ್ದನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವನ್ನು ಕರೆಸಲಾಗಿದೆ.

970×90