ಪಂಜಕ್ಕೂ ಬಂತು ಇಲೆಕ್ಟ್ರಿಕ್ ಕಾರು: ಒಮ್ಮೆ ಚಾರ್ಜಿಂಗ್ ಮಾಡಿದ್ರೆ 320 ಕಿ.ಮೀ. ದೂರ ಓಡುತ್ತೆ!

ಪಂಜಕ್ಕೂ ಬಂತು ಇಲೆಕ್ಟ್ರಿಕ್ ಕಾರು: ಒಮ್ಮೆ ಚಾರ್ಜಿಂಗ್ ಮಾಡಿದ್ರೆ 320 ಕಿ.ಮೀ. ದೂರ ಓಡುತ್ತೆ!

ಕಡಬ ಟೈಮ್ಸ್, ಪಂಜ: ಇತ್ತೀಚೆಗೆನ ದಿನಗಳಲ್ಲಿ ಡಿಸೇಲ್ ಪೆಟ್ರೋಲ್ ದರ ಏರಿಕೆ ಕಂಡಿದೆ. ಈ ನಡುವೆ  ಪಂಜದ ವ್ಯಕ್ತಿಯೊಬ್ಬರು  ಪರಿಸರ ಸ್ನೇಹಿ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ.

ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ,ಪಂಜ ಕೃಷ್ಣನಗರದ ಡಾ.ದೇವಿಪ್ರಸಾದ್ ಕಾನತ್ತೂರ್ ಹೊಗೆ ರಹಿತ ಕಾರು ಖರೀದಿಸಿದ ಸರದಾರ.

ಹೊಗೆ,ಶಬ್ದ ರಹಿತ‌‌ ಪರಿಸರ ಸ್ನೇಹಿ ಟಾಟಾ ನೆಕ್ಸಾನ್ ಇಲೆಕ್ಟ್ರಿಕ್ ಕಾರು ಇದಾಗಿದ್ದು  ಒಮ್ಮೆ ಚಾರ್ಜಿಂಗ್ ಆದರೆ ಸುಮಾರು 320 ಕಿ.ಮೀ.ಓಡುತ್ತದೆ. 8 ವರುಷ ಬ್ಯಾಟರಿ ವಾರೆಂಟಿ ಇರುತ್ತದೆ. ಕಂಪೆನಿಯ ಮಾಹಿತಿ ಪ್ರಕಾರ ಕಿ.ಮೀ.ಗೆ ಅಂದಾಜು ಕೇವಲ 7‌0 ಪೈಸೆ ಖರ್ಚಾಗುವುದು. ಮೂರು ಮೋಡೆಲ್ ನಲ್ಲಿ ಕಾರು ಮಾರುಕಟ್ಟೆಗೆ ಬಂದಿದ್ದು. ಇವರು ಖರೀದಿಸಿದ್ದು ಟಾಪ್ ಮೊಡೆಲ್ ಇದಕ್ಕೆ 17 ಲಕ್ಷದ 70 ಸಾವಿರ ರೂಪಾಯಿ.

970×90