ಕಲ್ಲುಗುಡ್ಡೆ: ಗ್ರಾಮೀಣ ಪ್ರದೇಶದಲ್ಲೂ  ಬೆಳಗ್ಗೆ  ಖರೀದಿ ಭರಾಟೆ ಜೋರು

ಕಲ್ಲುಗುಡ್ಡೆ: ಗ್ರಾಮೀಣ ಪ್ರದೇಶದಲ್ಲೂ  ಬೆಳಗ್ಗೆ  ಖರೀದಿ ಭರಾಟೆ ಜೋರು

ಕಡಬ ಟೈಮ್ಸ್, ಕಲ್ಲುಗುಡ್ಡೆ : ಸಾರ್ವಜನಿಕರು ದಿನಸಿ ಖರೀದಿಗೆ ಜಿಲ್ಲಾಡಳಿತ ಬೆಳಗ್ಗಿನ ಸಮಯ ನಿಗಧಿ ಪಡಿಸಿದೆ. ಆ ಸಮಯದಲ್ಲಿ ಗ್ರಾಮೀಣ ಭಾಗದಲ್ಲೂ ಹೆಚ್ಚಿನ ಸಂಖ್ಯೆಯ ಜನ ಪೇಟೆಯಲ್ಲಿರುವ ದೃಶ್ಯ ಕಂಡು ಬರುತ್ತಿದೆ.

ಜನರು ತಮ್ಮ ಹತ್ತಿರದ ಪೇಟೆಯ ಅಂಗಡಿಗಳಿಂದಲೇ ಸಾಮಾಗ್ರಿಗಳನ್ನು ಖರೀದಿಸುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ಅದರಂತೆ ಜನತೆ ಬೆಳಗ್ಗೆ ಗಂಟೆ 6ರಿಂದಲೇ ಸಾಮಾಗ್ರಿ ಖರೀದಿಸಲು ಪೇಟೆಗೆ ಆಗಮಿಸುತ್ತಾರೆ.  ಈ ಸಂದರ್ಭದಲ್ಲಿ ಪೇಟೆಯಲ್ಲಿ ಹೆಚ್ಚಿನ ವಾಹನ, ಜನಸಂದಣಿ ಕಂಡು ಬರುತ್ತಿದೆ.  ಅಲ್ಲದೇ ನ್ಯಾಯಬೆಲೆ ಅಂಗಡಿಗಳಲ್ಲೂ ಖರೀದಿಗೆ ಜನ ಬರುತ್ತಿರುತ್ತಾರೆ.

ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಸೂಕ್ತ ಪರಿಶೀಲನಾ ವ್ಯವಸ್ಥೆ ಕೈಗೊಳ್ಳಲಾಗಿದ್ದು, ಕೊರೊನಾ ಕಾರ್ಯಪಡೆ ತಂಡ ಸದಾ ಮಾಹಿತಿ ಕಳೆ ಹಾಕುತ್ತಿರುತ್ತಾರೆ.  ಕಡಬ ತಾಲೂಕಿನ ಬಿಳಿನೆಲೆ, ಬಳ್ಪ, ಯೇನೆಕಲ್ಲು,  ನೂಜಿಬಾಳ್ತಿಲ, ರೆಂಜಿಲಾಡಿ, ಕಲ್ಲುಗುಡ್ಡೆ, ಇಚ್ಲಂಪಾಡಿ, ಕಡ್ಯ ಕೊಣಾಜೆ, ಪಂಜ, ಹರಿಹರ, ಕೊಲ್ಲಮೊಗ್ರು ಭಾಗದಲ್ಲಿಯೂ ಜನ ನಿಗಧಿತ ಸಮಯದಂತೆ ಸಾಮಾಗ್ರಿಗಳನ್ನು ಖರೀದಿಸುತ್ತಿದ್ದಾರೆ. ಬಳಿ ಇಡೀ ಪೇಟೆಗಳು ಜನಸಂಚಾರವಿಲ್ಲದೆ ಖಾಲಿಯಾಗಿರುವ ದೃಶ್ಯ ಕಂಡುಬರುತ್ತದೆ. ಒಟ್ಟಿನಲ್ಲಿ ಪ್ರಸ್ತುತ ಪೇಟೆಗಳು ದಿನದಲ್ಲಿ ನಾಲ್ಕು ಗಂಟೆ ಮಾತ್ರ ಜನಸಂಚಾರದಿಂದ ಕೂಡಿರುತ್ತದೆ.

970×90