ಪೆರಾಬೆ:ಸಿಡಿಲು ಬಡಿದು ಬಿರುಕು ಬಿಟ್ಟ ಮನೆ ಗೋಡೆ, ವಿದ್ಯುತ್ ಉಪಕರಣಗಳಿಗೆ ಹಾನಿ

ಪೆರಾಬೆ:ಸಿಡಿಲು ಬಡಿದು ಬಿರುಕು ಬಿಟ್ಟ ಮನೆ ಗೋಡೆ, ವಿದ್ಯುತ್ ಉಪಕರಣಗಳಿಗೆ ಹಾನಿ

ಕಡಬ ಟೈಮ್ಸ್, ಪೆರಾಬೆ: ಕಡಬ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ೧೨ ರ ಸಾಯಂಕಾಲ ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದೆ.

ಕಡಬ ತಾಲೂಕಿನ ಪೆರಾಬೆ ಗ್ರಾಮದ ಕಡಿರಡ್ಕ ಗಿರಿಜಾ ಎಂಬವರ ಮನೆಗೆ ಸಿಡಿಲು ಬಡಿದಿದ್ದು ವಿದ್ಯುತ್ ಸ್ವಿಚ್ ಬೋರ್ಡ್ ಸಹಿತ ಉಪಕರಣಗಳಿಗೆ ಹಾನಿಯಾಗಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಇನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದವರಿಗೆ ಅಕಾಲಿಕ ಮಳೆಯಿಂದ ತೊಂದರೆಯಾಗಿರುವುದಾಗಿ ವಿವಿಧೆಡೆಯಿಂದ ಮಾಹಿತಿ ಲಭಿಸಿದೆ.
ತಾಲೂಕಿನ ನೆಲ್ಯಾಡಿ ಆಲಂಕಾರು,ಸವಣೂರು, ಸುಬ್ರಹ್ಮಣ್ಯದಲ್ಲೂ ಮಳೆಯಾದ ಬಗ್ಗೆ ವರದಿಯಾಗಿದೆ.

970×90