ಸುಬ್ರಹ್ಮಣ್ಯ: ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ಮನೆಗೆ ಎಸ್.ಪಿ ಭೇಟಿ  

ಸುಬ್ರಹ್ಮಣ್ಯ: ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ಮನೆಗೆ ಎಸ್.ಪಿ ಭೇಟಿ  

ಕಡಬ ಟೈಮ್ಸ್, ಸುಳ್ಯ:  ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ  ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ದಿವಾಕರ ಆಚಾರ್ಯ ಮನೆಗೆ ಎಸ್.ಪಿ. ರಿಷಿಕೇಶ್ ಸೋನಾವಾಲೆ ಮೇ ೧೨ ರಂದು ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ್ದಾರೆ.

ಈ ಸಂದರ್ಭ ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಎಸ್ ಐ ಓಮನ ಮತ್ತು ಸುಬ್ರಹ್ಮಣ್ಯ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ನಾಡಕೋವಿ ಪ್ರಕರಣದ ಮತ್ತೋರ್ವನ ಬಂಧನ : ನಾಲ್ಕೂರು ಗ್ರಾಮದ ಚತ್ರಪ್ಪಾಡಿ ಎಂಬಲ್ಲಿ ನಾಡಕೋವಿ ತಯಾರಿಕೆದಾರ ಮತ್ತು ಅದನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ  ಇಂದು ಕೆಯ್ಯೂರು ಗ್ರಾಮದ ಪಾಲ್ತಾಡಿನ ಲೋಹಿತ್ ಬಂಗೇರ ಎಂಬವರನ್ನು ಬಂಧಿಸಿದ್ದಾರೆ.ಅಲ್ಲದೆ   ಅವರಲ್ಲಿದ್ದ  ಒಂದು ಕೋವಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ  ಜೋಗಿ ಮತ್ತು ಸುಬ್ರಹ್ಮಣ್ಯ ಎಸ್ ಐ ಓಮನ ಅವರ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

970×90