ನದಿಗೆ ಸ್ನಾನಕ್ಕೆ ಹೋದ ಯುವಕ ಮುಳುಗಿ ಸಾವು| ಉಪವಾಸ ಲೆಕ್ಕಿಸದೆ ಮೃತದೇಹವನ್ನು ಮೇಲೆತ್ತಿದ ಬಶೀರ್ ನೇತೃತ್ವದ  ಮುಳುಗು ತಜ್ಞರ ತಂಡ

ನದಿಗೆ ಸ್ನಾನಕ್ಕೆ ಹೋದ ಯುವಕ ಮುಳುಗಿ ಸಾವು| ಉಪವಾಸ ಲೆಕ್ಕಿಸದೆ ಮೃತದೇಹವನ್ನು ಮೇಲೆತ್ತಿದ ಬಶೀರ್ ನೇತೃತ್ವದ  ಮುಳುಗು ತಜ್ಞರ ತಂಡ

ಕಡಬ ಟೈಮ್ಸ್, ಸುಳ್ಯ: ಸುಳ್ಯದ ಅರಂಬೂರಿನಲ್ಲಿ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಯುವಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ  ನಡೆದಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ಹೊರಕ್ಕೆ ತೆಗೆದ ಘಟನೆ ಮೇ ೧೨ ರಂದು ನಡೆದಿದೆ.

ಅರಂಬೂರಿನ ಪ್ರೀತಂ  ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರ  ಮಾಡುವ ಯುವಕರು ಮೇ ೧೧ ರಂದು  ಮಧ್ಯಾ ಹ್ನ ಸ್ನಾನಕ್ಕೆಂದು ಪಾಲಡ್ಕ ಸಮೀಪ ಪಯಸ್ವಿನಿ ನದಿಗೆ ಹೋಗಿದ್ದರು. ಈ ತಂಡದಲ್ಲಿದ್ದ  ಕುಂದನ್ ಎಂಬ ಒಬ್ಬ ಯುವಕ ಮಾತ್ರ ಕಣ್ಮರೆಯಾಗಿದ್ದ  ಸಂಜೆಯ ಬಳಿಕ ಹುಡುಕಾಡಿದರೂ  ಆತನ ಪತ್ತೆಯಾಗಲಿಲ್ಲ.

ಇಂದು  ಪೈಚಾರಿನ ಆರ್.ಬಿ.ಬಶೀರ್ ನೇತೃತ್ವದ ಮುಳುಗು ತಜ್ಞರ ತಂಡ ಆಗಮಿಸಿ ನೀರಲ್ಲಿ ಮುಳುಗಿ ಹುಡುಕಾಡಿ ಕುಂದನ್  ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ.ಈ ಕಾರ್ಯಾಚರಣೆಯಲ್ಲಿ ಆರ್.ಬಿ.ಬಶೀರ್ ಜೊತೆಗೆ ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ರಿಫಾಯಿ ಸೋಣಂಗೇರಿ, ಬಶೀರ್ ಕೆ.ಪಿ. ಮೊದಲಾದವರು ಭಾಗವಹಿಸಿದ್ದರು.

ರಂಝಾನ್ ಉಪವಾಸದಲ್ಲಿ ತೊಡಗಿದ್ದರೂ ಈ ಯುವಕರು ಈ ಕಾರ್ಯ ನೆರವೇರಿಸಿರುವುದು ವ್ಯಾಪಕ ಶ್ಲಾಘನೆಗೆ ಕಾರಣವಾಗಿದೆ.

970×90