ಕೊಯಿಲದಲ್ಲಿ ಕೋವಿಡ್ ಮುಂಜಾಗ್ರತಾ ಸಭೆ :ಸ್ಥಳೀಯ ಶಾಲೆಗಳನ್ನೇ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿ – ಸಚಿವ ಅಂಗಾರ

ಕೊಯಿಲದಲ್ಲಿ ಕೋವಿಡ್ ಮುಂಜಾಗ್ರತಾ ಸಭೆ :ಸ್ಥಳೀಯ ಶಾಲೆಗಳನ್ನೇ ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಿ – ಸಚಿವ ಅಂಗಾರ

ಕಡಬ ಟೈಮ್ಸ್, ಕೊಯಿಲ : ಹೊರ ರಾಜ್ಯ ಮತ್ತು  ಹೊರ ಜಿಲ್ಲೆಯಿಂದ ಬಂದವರನ್ನು ಗುರುತಿಸಿ ಅಂತಹವರನ್ನು ಕಡ್ಡಾಯವಾಗಿ ಕ್ವಾ ರಂಟೈನ್‌ಗೆ ವ್ಯವಸ್ಥೆ ಮಾಡಿ, ನೇರವಾಗಿ ಕಡಬ ಅಥವಾ  ಪುತ್ತೂರು ಕೇಂದ್ರಗಳಲ್ಲಿ  ಇಲ್ಲವೇ  ಸ್ಥಳೀಯವಾಗಿ ಶಾಲೆಗಳನ್ನೇ  ಕೇಂದ್ರಗಳನ್ನಾಗಿ ಮಾಡಿ ಕ್ವಾರಂಟೈನ್ ಆಗುವಂತೆ ವ್ಯವಸ್ಥೆ ಮಾಡಬೇಕು ಎಂದು ಸಚಿವ ಎಸ್. ಅಂಗಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಮೇ. ೧೦ರಂದು ಕೊಯಿಲ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿ, ಜನಪ್ರತಿನಿಧಿಗಳ ಕೋವಿಡ್-೧೯ ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೊರೋನಾ ದ ಬಗ್ಗೆ  ನಿರ್ಲಕ್ಷ ಸಲ್ಲದು , ನಾವು ಜಾಗೃತರಾಗದಿದ್ದಲ್ಲಿ ಇದರ ದುಷ್ಪರಿಣಾಮವನ್ನು ಪ್ರತಿಯೋರ್ವರೂ ಅನುಭವಿಸಬೇಕಾಗುತ್ತದೆ.ದೂರದ ಊರಿಂದ ಬಂದವರು ಕ್ವಾರಂಟೈನ್ ಗೆ  ಸ್ಪಂಧಿಸದೆ  ಉಡಾಫೆಯಿಂದ ವರ್ತಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದರು.

ತಹಸೀಲ್ದಾರ್ ಅನಂತ ಶಂಕರ, ತಾ.ಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ತಾ. ಪ್ರಭಾರ ವೈದ್ಯಾಧಿಕಾರಿ ಡಾ| ಅಶೋಕ್ ರೈ  ಅವರು ಸಮಯೋಚಿತವಾಗಿ  ಮಾತನಾಡಿ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಸಹಾಯಕಿಯರು, ಅಂಗನವಾಡಿ ಕಾರ್‍ಯಕರ್ತರು, ಆಶಾ ಕಾರ್ಯಕರ್ತರಿಗೆ ನೀಡಿರುವ ಜವಾಬ್ದಾರಿಗಳ ಬಗ್ಗೆ ತಿಳಿಸಿ, ಅಗತ್ಯ ಬಿದ್ದಲ್ಲಿ ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು. ಕೊಯಿಲ ಆರೋಗ್ಯ ಕೇಂದ್ರದ ಪ್ರಭಾರ ವೈದ್ಯಾಧಿಕಾರಿ ಡಾ| ಸುಚಿತ್ರಾ ರಾವ್,  ಪಿಡಿಒ. ಎ.ಕೆ. ನಮಿತಾ ಸ್ವಾಗತಿಸಿ, ಕಾರ್ಯದರ್ಶಿ ಪಮ್ಮು ಆರೋಗ್ಯ ಸಹಾಯಕಿ ಲೀಲಾವತಿ ಸೇರಿದಂತೆ ಗ್ರಾ.ಪಂ ಆಡಳಿತ ಉಪಸ್ಥಿತರಿದ್ದರು.

970×90