ಹುಲಿವೇಷ  ನರ್ತನದ ಮೂಲಕ ಮನೆಮಾತಾಗಿದ್ದ ‘ಪಿಲಿ ಕಿಟ್ಟಣ್ಣ, ಇನ್ನಿಲ್ಲ

ಹುಲಿವೇಷ  ನರ್ತನದ ಮೂಲಕ ಮನೆಮಾತಾಗಿದ್ದ ‘ಪಿಲಿ ಕಿಟ್ಟಣ್ಣ, ಇನ್ನಿಲ್ಲ

ಕಡಬ ಟೈಮ್ಸ್,  ವಿಟ್ಲ: ಹುಲಿ ವೇಷದ ಮೂಲಕ ಪಿಲಿ ಕಿಟ್ಟಣ್ಣ ಎಂದೆ ಖ್ಯಾತಿ ಪಡೆದಿದ್ದ ಕಿಟ್ಟಣ್ಣ ಅವರು ಅಸೌಖ್ಯದಿಂದ ಮೇ ೮ ರಂದು ನಿಧನ  ಹೊಂದಿದ್ದಾರೆ.

ಕಳೆದ 53 ವರ್ಷದಿಂದ ದಸರಾ ಸಮಯದಲ್ಲಿ ಹುಲಿವೇಷ ಧರಿಸಿ ವಿಟ್ಲ,  ಪುತ್ತೂರು ಭಾಗದ ಜನರನ್ನು ರಂಜಿಸುತ್ತಿದ್ದ ಇವರು  ತನ್ನದೇ ಹುಲಿ ಕುಣಿತದ  ತಂಡವನ್ನು ಕಟ್ಟಿಕೊಂಡು  ವಿಶೇಷ ಶೈಲಿಯ ನರ್ತನದ ಮೂಲಕ ಮನೆಮಾತಾಗಿದ್ದರು.

ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ‘ಪಿಲಿ ಕಿಟ್ಟಣ್ಣ’ ಅವರು   ವಿಟ್ಲ ದೇವತಾ ಸಮಿತಿಯ ಶಾರದೋತ್ಸವದ  ಪ್ರಾರಂಭದ ಮೆರವಣಿಗೆ ಹಾಗೂ ವಿಸರ್ಜನಾ  ಮೆರವಣಿಗೆಯಲ್ಲಿ ಸಕ್ರಿಯವಾಗಿ ತನ್ನ ತಂಡದೊಂದಿಗೆ ಭಾಗವಹಿಸುತ್ತಿದ್ದರು.ಇವರ ನಿಧನಕ್ಕೆ ಹಲವು ಕಲಾಭಿಮಾನಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.

970×90