ನಿರ್ಗತಿಕರ ,ಮೂಕ ಪ್ರಾಣಿಗಳ ಹಸಿವು ನೀಗಿಸಿದ  ಗ್ರಾ.ಪಂ ಸದಸ್ಯ

ನಿರ್ಗತಿಕರ ,ಮೂಕ ಪ್ರಾಣಿಗಳ ಹಸಿವು ನೀಗಿಸಿದ  ಗ್ರಾ.ಪಂ ಸದಸ್ಯ

ಕಡಬ ಟೈಮ್, ಧರ್ಮಸ್ಥಳ: ಕೆಲಸವಿಲ್ಲದೆ ಅನಾಥರಿಗೆ ಮತ್ತು ಮೂಕ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಗ್ರಾ.ಪಂ ಸದಸ್ಯರೊಬ್ಬರು ಮಾನವೀಯತೆ ತೋರುತ್ತಿದ್ದಾರೆ.

ಧರ್ಮಸ್ಥಳ ಗ್ರಾ. ಪಂ. ಸದಸ್ಯ ಹರ್ಷಿತ್ ಜೈನ್ ಭಿಕ್ಷುಕರಿಗೆ, ಮೂಕ ಪ್ರಾಣಿಗಳಿಗೆ , ನಿರ್ಗತಿಕರ ಹಸಿವು ನೀಗಿಸುತ್ತಿರುವ ಅನ್ನದಾತ.

ಕೋವಿಡ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿ ಮಾಡಿದ್ದು,  ರೆಸ್ಟೋರೆಂಟ್- ಹೊಟೇಲ್ ಸೇರಿಂದಂತೆ ಕ್ಯಾಂಟೀನ್ ಗಳನ್ನು ತೆರೆಯದಂತೆ ನಿಯಮ ಮಾಡಲಾಗಿದೆ.  ಪರಿಣಾಮ ಬೀದಿ ಬದಿಯಲ್ಲೇ ಜೀವನ ಸಾಗಿಸುವವರು ಆಹಾರಕ್ಕಾಗಿ ಪರದಾಡುತ್ತಿದ್ದಾರೆ.ಇದನ್ನು ಗಮನಿಸಿದ  ಹರ್ಷಿತ್ ಜೈನ್ ಅವರು ಈ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದು ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

970×90