ಕಡಬ: ತಡೆಗೋಡೆ ಕುಸಿತ:ಸಾವಿನ ದವಡೆಯಿಂದ ಪಾರಾದ ಬಾಲಕ

ಕಡಬ: ತಡೆಗೋಡೆ ಕುಸಿತ:ಸಾವಿನ ದವಡೆಯಿಂದ ಪಾರಾದ  ಬಾಲಕ

ಕಡಬ ಟೈಮ್ಸ್, ಕೋಡಿಂಬಾಳ: ಇಲ್ಲಿನ  ಪ.ಪಂ  ವ್ಯಾಪ್ತಿಯ ಕೋಡಿಂಬಾಳದಲ್ಲಿ ತೋಡಿಗೆ ನಿರ್ಮಿಸಲಾದ ಕಿಂಡಿ ಅಣೆ ಕಟ್ಟಿನ ತಡೆಗೋಡೆ ಕುಸಿದ ವೇಳೆ  ಬಾಲನೋರ್ವ  ಸಿಲುಕಿ ಅಪಾಯದಿಂದ ಪಾರಾದ ಘಟನೆ ಮೇ ೭ ರಂದು ನಡೆದಿದೆ.

ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ ಮೋನಪ್ಪ ಗೌಡರ  ಪುತ್ರ ಧನ್ವಿತ್(10ವ.) ಸಾವಿನ ದವಡೆಯಿಂದ ಪಾರಾದ ಬಾಲಕ.

ಆಟವಾಡಲೆಂದು ಮನೆ ಪಕ್ಕ ತೋಟಕ್ಕೆ ಸಹೋದರ ದಕ್ಷಿತ್ ಜೊತೆ  ತೆರಳುವಾಗ ತಡೆಗೋಡೆಯನ್ನು  ಸ್ಪರ್ಶಿಸಿದ್ದು,  ಈ ವೇಳೆ  ಏಕಾಏಕಿ  ತಡೆಗೋಡೆಯ ಒಂದು ಭಾಗ  ಕುಸಿದಿದ್ದು ಬಾಲಕ ಅದರೊಂದಿಗೆ  ಬಿದ್ದಿದ್ದ.   ಇದನ್ನು ಗಮನಿಸಿದ ಬಾಲಕನ ಸಹೋದರ ಸಹಾಯಕ್ಕಾಗಿ ಮನೆಯವರನ್ನು ಬೊಬ್ಬೆ ಹೊಡೆದು ಕರೆದಿದ್ದು , ಬಾಲಕನ ತಾಯಿ   ವಾರಿಜ ಅವರು ತಕ್ಷಣ ಬಂದಿದ್ದರಾದರೂ  ಅವರಿಗೆ ತೋಡಿಗೆ ಇಳಿಯಲಾಗಲಿಲ್ಲ.  ಈ ವೇಳೆ ನೆರೆಮನೆಯ ವ್ಯಕ್ತಿಯೋರ್ವರು  ಆಗಮಿಸಿ ತಡೆಗೋಡೆಯ ಅಡಿಯಲ್ಲಿ  ಸಿಲುಕಿಕೊಂಡಿದ್ದ ಬಾಲಕನ್ನು ಮೇಲಕ್ಕೆತ್ತಿದ್ದಾರೆ.ಬಾಲಕನ ತಲೆ,ಕೈ, ಕಾಲುಗಳಿಗೆ  ಸಣ್ಣ ಪುಟ್ಟ ಗಾಯಗಳಾಗಿದ್ದು  ಕೂಡಲೇ   ಕಡಬ ಸಮುದಾಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ತಡೆಗೋಡೆ ಕುಸಿಯಲು   ಕಳಪೆ ಕಾಮಗಾರಿ ಕಾರಣ?

ಕಿಂಡಿ ಆಣೆಕಟ್ಟಿನ ತಡೆಗೋಡೆಯ ಮೇಲೆ ಸಿಮೆಂಟ್ ಇಟ್ಟಿಗೆಯಲ್ಲಿ  ಅವೈಜ್ಞಾನಿಕವಾಗಿ ಕಟ್ಟಿರುವುದೇ ಕುಸಿಯಲು ಕಾರಣ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.  ಗ್ರಾ.ಪಂ ಅಸ್ತಿತ್ವವಿದ್ದ ಸಂದರ್ಭ  ಸುಮಾರು 3 ಲಕ್ಷ ಅನುದಾನದಲ್ಲಿ ಈ ಕಾಮಗಾರಿಯನ್ನುಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

970×90