ಕಡಬ:ಆರುಗಂಟೆಯಿಂದಲೇ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಂತ ಜನರು

ಕಡಬ:ಆರುಗಂಟೆಯಿಂದಲೇ ನ್ಯಾಯಬೆಲೆ ಅಂಗಡಿ ಮುಂದೆ ಕ್ಯೂ ನಿಂತ ಜನರು

ಕಡಬ ಟೈಮ್ಸ್, ಕಡಬ: ಜಿಲ್ಲಾಡಳಿತವು ದ.ಕ ಜಿಲ್ಲೆಗೆ ಪ್ರತ್ಯೇಕ ಲಾಕ್ ಡೌನ್ ನಿಯಮ ಜಾರಿಗೊಳಿಸಿ ಕೊರೋನಾ ಹತೋಟಿಗೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ ೬ ಅರಿಂದ ೯ ರವರೆಗೆ ಮಾತ್ರ ಅವಕಾಶ ಕಲ್ಪಿಸಿದೆ.

ಶುಕ್ರವಾರ ಕಡಬದ ನ್ಯಾಯಬೆಲೆ ಅಂಗಡಿಗೆ ಆರು ಗಂಟೆಯಿಂದಲೇ ವಿವಿಧ ಭಾಗದಿಂದ ಜನರು ಬಂದು ಕಾಯುತ್ತಿದ್ದುನ್ಯಾಯ ಬೆಲೆ ಅಂಗಡಿ ಸಿಬ್ಬಂದಿಗಳು ೭:೧೫ ರ ಹೊತ್ತಿಗೆ ಆಗಮಿಸಿದ್ದಾರೆ. ಜನ ಕಾದು ಕಾದು ಸುಸ್ತುಗೊಂಡು ಸ್ಥಳದಲ್ಲೇ ಕುಳಿತಿರುವ ದೃಶ್ಯ ಕಂಡು ಬಂದಿದೆ.

 

 

 

ಟೋಕನ್ ಪಡೆಯಲು ಅಧಿಕ ಮಂದಿ ಕ್ಯೂ ನಿಂತಿದ್ದು ಇನ್ನು ಟೋಕನ್ ಲಭಿಸಿಲ್ಲ, ಒಂಭತ್ತು  ಗಂಟೆಯವರೆಗೆ ಮಾತ್ರ  ಪಡಿತರ ವಿತರಣೆ ಎಂಬ ಮಾತು ಕೇಳಿಬರುತ್ತಿದ್ದು   ಇಷ್ಟೊಂದು ಜನಕ್ಕೆ ಟೋಕನ್ ವ್ಯವಸ್ಥೆ ಸಾಧ್ಯವೇ  ಎಂದು ಕೋಡಿಂಬಾಳದ ಪಡಿತರ ಚೀಟಿದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

970×90