ಕಡಬ :ಲಾಕ್ ಡೌನ್ 9 ನೇ ದಿನ | 7 ವಾಹನಗಳು ಸಿಝ್ |ಪೊಲೀಸರ  ಕಠಿಣ ಕ್ರಮಕ್ಕೆ ವಾಹನ ಓಡಾಟ ವಿರಳ

ಕಡಬ :ಲಾಕ್ ಡೌನ್ 9 ನೇ ದಿನ | 7 ವಾಹನಗಳು ಸಿಝ್  |ಪೊಲೀಸರ  ಕಠಿಣ ಕ್ರಮಕ್ಕೆ ವಾಹನ ಓಡಾಟ ವಿರಳ

ಕಡಬ ಟೈಮ್ಸ್, ಕಡಬ: ಕೊವಿಡ್೧೯ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಲಾಕ್ ಡೌನ್ ಹೇರಿದ್ದು ಒಂಭತ್ತನೇ ದಿನಕ್ಕೆ ಮುಂದುವರೆದಿದೆ.

ಸಾಕಷ್ಟು ಎಚ್ಚರಿಕೆಗಳನ್ನು ನೀಡಿದರೂ ಜನರು ನಿರ್ಲಕ್ಷತೆಯನ್ನು ತೋರುತ್ತಿದ್ದು ಪಟ್ಟಣ ಪಂಚಾಯತ್ ದಂಢ ವಿಧಿಸುವ ಕಾರ್ಯ ಮಾಡಿದರೂ ಜನರು ಕೇರ್ ಮಾಡದ ಕಾರಣದಿಂದ ಕಡಬ ಪೊಲೀಸರು  ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಗುರುವಾರದಂದು ಬಿಗಿ ನಿಯಮ ಕೈಗೊಂಡ  ಹಿನ್ನೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ವಾಹನ ಓಡಾಟಗಳ ಸಂಖ್ಯೆ ಕಡಿಮೆಯಾಗಿದೆ. ಸುಳ್ಳು ನೆಪ ಹೇಳಿಕೊಂಡು ಓಡಾಟ ನಡೆಸಿದ ವಾಹನ ಸವಾರರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದು,  ಇಂದು ಮಧ್ಯಾಹ್ನದ ೧ ಗಂಟೆಯ ವರೆಗೆ  ಕಡಬ ಪೊಲೀಸರುಕೋವಿಡ್ ನಿಯಮ,ಸಂಚಾರಿ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ೭ ವಾಹನಗಳನ್ನು ಮುಟ್ಟುಗೋಳು ಹಾಕಿದ್ದಾರೆ.  ಇತರ ೬ ವಾಹನಗಳಿಗೆ ದಂಡ ವಿಧಿಸಿದ್ದು ಒಟ್ಟು .೧೦,೦೦೦ ರೂ ದಂಡ ಸಂಗ್ರಹವಾಗಿದೆ ಎಂದು ಎಸ್.ಐ ರುಕ್ಮ ನಾಯ್ಕ್ ಕಡಬ ಟೈಮ್ಸ್ ಗೆ ಮಾಹಿತಿ ನೀಡಿದ್ದಾರೆ.

ಮುಂಜಾನೆ ೬ ರಿಂದಲೇ ಕಡಬ ಪೊಲೀಸರ ತಂಡ ಠಾಣಾ ವ್ಯಾಪ್ತಿಯಲ್ಲಿ ಗಸ್ತು ತಿರುಗಿ ದಿನದ ವಿದ್ಯಮಾನಗಳ ಬಗ್ಗೆ ಅವಲೋಕನ ಮಾಡಿದ್ದಾರೆ.ಆಲಂಕಾರು,ರಾಮಕುಂಜ ಚಕ್ ಪೋಸ್ಟ್ ನಲ್ಲೂ ಬಿಗಿ ಕ್ರಮ ಕೈಗೊಂಡಿದ್ದಾರೆ

970×90