ಸುಳ್ಯದಲ್ಲಿ ಪೊಲೀಸರ ಟೈಟ್ ರೂಲ್ಸ್:ಅನಗತ್ಯ ವಾಹನಗಳಿಗೆ ಬಂದ ದಾರಿಯೇ ಗತಿ

ಸುಳ್ಯದಲ್ಲಿ ಪೊಲೀಸರ ಟೈಟ್ ರೂಲ್ಸ್:ಅನಗತ್ಯ ವಾಹನಗಳಿಗೆ ಬಂದ ದಾರಿಯೇ ಗತಿ

ಕಡಬ ಟೈಮ್ಸ್, ಸುಳ್ಯ:ಕೊರೋನಾ ಎರಡನೆಯ ಅಲೆಗೆ  ದಿನಕಳೆದಂತೆ ಸೋಂಕಿತರ ಸಂಖ್ಯೆ ಗಣನೀಯ ಮಟ್ಟದಲ್ಲಿ ಹೆಚ್ಚಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಸುಳ್ಯ ನಗರದಾದ್ಯಂತ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ಗುರುವಾರ ಸುಳ್ಯದ ಜ್ಯೋತಿ ವೃತ್ತ, ಗಾಂಧಿನಗರ ಪೆಟ್ರೋಲ್ ಬಂಕ್ ಬಳಿ, ವಿವೇಕಾನಂದ ಸರ್ಕಲ್ ಬಳಿ ಸುಳ್ಯ ನಗರಕ್ಕೆ ಅನಾವಶ್ಯಕವಾಗಿ ಬರುತ್ತಿರುವ ವಾಹನಗಳನ್ನು ತಡೆಹಿಡಿದು ಹಿಂದಕ್ಕೆ ಕಳುಹಿಸಿದರು. ಕೆಲವರಿಗೆ ದಂಡವನ್ನೂ ವಿಧಿಸಿದರು.ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಯವರು ಸುಳ್ಯ ಗಾಂಧಿನಗರ ಬಳಿ ವಾಹನ ತಪಾಸಣೆ ನಡೆಸಿದರು.

ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ಎಂ. ಆರ್. ಹರೀಶ್ ರವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ಸಾರ್ವಜನಿಕರು ಅವರ ಆರೋಗ್ಯದ ಕಾಳಜಿಯನ್ನು ವಹಿಸಿಕೊಂಡು ಸ್ಥಳೀಯ ಪರಿಸರಗಳಲ್ಲಿ ಇರುವ ಅಂಗಡಿ-ಮುಂಗಟ್ಟು ಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಜನ ನಿಬಿಡತೆಯನ್ನು ತಪ್ಪಿಸಿಕೊಳ್ಳಿ” ಎಂದು ಎಸ್.ಐ ಸಲಹೆ ನೀಡಿದ್ದಾರೆ.

970×90