ಆಲಂಕಾರು: 76 ಮಂದಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ರಕ್ತದಾನ

ಆಲಂಕಾರು: 76 ಮಂದಿ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ರಕ್ತದಾನ

ಕಡಬ ಟೈಮ್ಸ್,  ಆಲಂಕಾರು:  ಹಿಂದು ಜಾಗರಣ ವೇದಿಕೆಯ 76 ಮಂದಿ  ಕಾರ್ಯಕರ್ತರು ಸಾಮೂಹಿಕವಾಗಿ ರಕ್ತದಾನ ಮಾಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.

ಆಲಂಕಾರು ಭಾರತೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ  ಕಡಬದ ಹಿಂದೂ ಜಾಗರಣಾ ವೇದಿಕೆಯು  ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ರಕ್ತದಾನ ಶಿಬಿರ ಮಾಡಿ  ಇನ್ನೊಬ್ಬರ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಶಿಬಿರವನ್ನು  ದೀಪ ಬೆಳಗಿಸಿ ಉದ್ಘಾಟಿಸಿದ್ದಾರೆ. ಹಿಂ.ಜಾ.ವೇ ಕಡಬ ತಾಲೂಕು ಅಧ್ಯಕ್ಷ ಮಲ್ಲೇಶ .ಎನ್, ಜಿಲ್ಲಾ ಉಪಾದ್ಯಕ್ಷರಾದ ವೆಂಕಟ್ರರಮಣ ಕುತ್ಯಾಡಿ, ಆಲಂಕಾರು ವಲಯಾಧ್ಯಕ್ಷ ಧನಂಜಯ ಕಜೆ, ಆಲಂಕಾರು ಘಟಕದ ಅಧ್ಯಕ್ಷ ದಯಾನಂದ ಗೌಡ ಆಲಡ್ಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿಯ ಜಿಲ್ಲಾಸಂಯೋಜಕ ಪ್ರವೀಣ್ ಕುಮಾರ್, ಡಾ.ಮನೋಹರ ರೈ ಯವರು ಸಂದರ್ಭೋಚಿತವಾಗಿ ಮಾತನಾಡಿದರು.

ಹಿಂ.ಜಾ.ವೇ ತಾಲೂಕು ಪ್ರಧಾನ ಕಾರ್ಯದರ್ಶಿ ಗಳಾದ ರವೀಂದ್ರದಾಸ್, ಹರೀಶ್, ಜಿನಿತ್ ಮರ್ದಾಳ ಸೇರಿದಂತೆ ಆಯಾಯ ಘಟಕದ ಪದಾಧಿಕಾರಿಗಳು ಒಟ್ಟು ಕಾರ್ಯಕ್ರಮದಲ್ಲಿ ಸಹಕರಿಸಿದರು.

970×90