ನಬಾರ್ಡ್ ಅನುಮತಿ  ನೀಡಿದರೆ ಮಾತ್ರ ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆ -ಸಚಿವ ಶಿವರಾಮ ಹೆಬ್ಬಾರ್

ನಬಾರ್ಡ್ ಅನುಮತಿ  ನೀಡಿದರೆ ಮಾತ್ರ ಬೆಳೆ ಸಾಲ ಮರುಪಾವತಿ ಅವಧಿ ವಿಸ್ತರಣೆ -ಸಚಿವ ಶಿವರಾಮ ಹೆಬ್ಬಾರ್

ಕಡಬ ಟೈಮ್ಸ್, ಮುಖ್ಯ ಸುದ್ದಿ:  ರೈತರು ತಾವು ಮಾಡಿದ ಬೆಳೆ ಸಾಲದ ಮೊತ್ತವನ್ನು ನಿಗದಿತ ದಿನದೊಳಗೆ ಮರುಪಾವತಿ ಮಾಡತಕ್ಕದ್ದು, ಸಾಲ ಮರುಪಾವತಿಸಿದ 15 ದಿನಗಳಲ್ಲಿ ಮರು ಸಾಲ ವಿತರಿಸಲಾಗುವುದು. ಅಲ್ಲದೆ ರೈತರು ಮಾಡಿರುವ ಬೆಳೆ ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು  ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ರಾಜ್ಯಾದ್ಯಂತ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಮಧ್ಯೆಯೂ ಬೆಳೆ ಸಾಲ ಮರುಪಾವತಿ ಅನಿವಾರ್ಯವಾಗಿದ್ದು, ರೈತರ ಮೇಲಿನ ಸಾಲ ಮರುಪಾವತಿ ಭಾರವನ್ನು ಇಳಿಸುವ ನಿಟ್ಟಿನಲ್ಲಿ ಶೀಘ್ರವೇ ಸರ್ಕಾರ ಚಿಂತಿಸಬೇಕಾಗಿದೆ.

ಸಾಲ ಮರುಪಾವತಿ ಅವಧಿ ವಿಸ್ತರಣೆ ಮಾಡುವುದು ರಾಜ್ಯ ಸರ್ಕಾರದ ಕೈಯ್ಯಲ್ಲಿಲ್ಲ. ಒಂದು ವೇಳೆ ನಬಾರ್ಡ್ ಅನುಮತಿ ನೀಡಿದರೆ ಮಾತ್ರ ಅವಧಿ ವಿಸ್ತರಣೆ ಸಾಧ್ಯ ಎಂದು ಅವರು ಹೇಳಿಕೆ ನೀಡಿದ್ದಾರೆ

970×90