ಕಡಬ: 3ನೇ ದಿನದ ಲಾಕ್ ಡೌನ್|ಮುಖ್ಯ ರಸ್ತೆಯಲ್ಲಿ  ಟಿಪ್ಪರ್ ಗಳ ದರ್ಬಾರ್

ಕಡಬ: 3ನೇ ದಿನದ ಲಾಕ್ ಡೌನ್|ಮುಖ್ಯ ರಸ್ತೆಯಲ್ಲಿ  ಟಿಪ್ಪರ್ ಗಳ ದರ್ಬಾರ್

ಕಡಬ ಟೈಮ್ಸ್, ಕಡಬ: ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಎ.30ರಂದು ಕಡಬದ ರಾಜ್ಯ ಹೆದಾರಿಯಲ್ಲಿ  ಅತೀ ವೇಗದಿಂದ ಸಂಚರಿಸುವ ಟಿಪ್ಪರ್ ಗಳ ದರ್ಬಾರ್ ಜೋರಾಗಿತ್ತು.

ಅಗತ್ಯ ವಸ್ತುಗಳ ಖರೀದಿಗಳ ಸಮಯ ಮುಕ್ತಾಯದ ಬಳಿಕ  ಸಾರ್ವಜನಿಕರ ವಾಹನಗಳ ಓಡಾಟ ಕಡಿಮೆಯಾಗಿತ್ತು, ಬಳಿಕ ರಾಜ್ಯ ಹೆದ್ದಾರಿಯಲ್ಲಿ   ಯಾವುದೇ ಲಂಗು ಲಗಾಮು ಇಲ್ಲದೆ  ಟಿಪ್ಪರ್ ಗಳ ಓಡಾಟ ಅಧಿಕವಾಗಿತ್ತು.  ಈ ವಾಹನಗಳಿಗೆ ಪೊಲೀಸ್ ಚಕ್ ಪೋಸ್ಟ್ ಗಳಲ್ಲಿ ಯಾವುದೇ  ತಪಾಸಣೆಗಳಿಲ್ಲದೆ ಮುಕ್ತ ಅವಕಾಶವಿತ್ತು.

ಕೆಲ ಕಡೆಗಳಲ್ಲಿ ವಿವಿಧ ಕಾಮಗಾರಿಗಳು  ನಡೆಯುತ್ತಿರುವ ಹಿನ್ನೆಲೆಯಲ್ಲಿ  ಟಿಪ್ಪರ್ ವಾಹನಗಳು ಸಂಚರಿಸುತ್ತಿವೆ. ಕೆಲ ಟಿಪ್ಪರ್ ಗಳು ಅನಗ್ಯವಾಗಿ ಓಡಾಟ ಮಾಡುತ್ತಿರುವುದುದನ್ನು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಟಿಪ್ಪರ್ ಗಳ ಓಡಾಟದಿಂದ    ಅಗತ್ಯ ಸಂದರ್ಭದಲ್ಲಿ  ಸಂಚರಿಸುವ ವಾಹನಗಳ ಸವಾರರು ಜೀವ ಭಯದಲ್ಲೇ ಹೋಗುತ್ತಿರುವುದು ಕಂಡು ಬಂತು.

ಇನ್ನು ಮೆಡಿಕಲ್ ಗಳು ತೆರೆದಿದ್ದು ತುರ್ತು ಸಂದರ್ಭಕ್ಕಾಗಿ ಜನರು ಪೇಟೆಗೆ ಆಗಮಿಸುತ್ತಿರುವುದು ಕಂಡು ಬಂತು.  ಕಡಬ ಠಾಣಾ ಪೊಲೀಸರು ತಮ್ಮ ಸರಹದ್ದಿನಲ್ಲಿ ಗಸ್ತು ತಿರುಗಿ    ದಿನದ ಹಾಗೂ ಹೋಗುಗಳ ಬಗ್ಗೆ ಅವಲೋಕನ ಮಾಡುತ್ತಿದ್ದಾರೆ.

.

970×90