ನೆಲ್ಯಾಡಿ: ಸಾಮೂಹಿಕ ರಕ್ತದಾನದ ಮೂಲಕ ಸ್ನೇಹಿತನ ಹುಟ್ಟು ಹಬ್ಬ ಆಚರಿಸಿದ ಯುವಕರ ತಂಡ

ನೆಲ್ಯಾಡಿ: ಸಾಮೂಹಿಕ ರಕ್ತದಾನದ ಮೂಲಕ ಸ್ನೇಹಿತನ ಹುಟ್ಟು ಹಬ್ಬ ಆಚರಿಸಿದ ಯುವಕರ ತಂಡ

ಕಡಬ ಟೈಮ್ಸ್, ನೆಲ್ಯಾಡಿ: ಹುಟ್ಟು ಹಬ್ಬವನ್ನು ದೊಡ್ಡ ಔತಣ ಕೂಡ ಅಥವಾ ಕೇಕ್ ತುಂಡರಿಸಿ ಆಚರಣೆ ಮಾಡುವುದು ಮಾಮೂಲಿ.ಆದ್ರೆ ತನ್ನ ಸ್ನೇಹಿತನ ಹುಟ್ಟು ಹಬ್ಬವನ್ನು ಸಾಮೂಹಿಕ ರಕ್ತದಾನ ಮಾಡುವ ಮೂಲಕಯುವಕರ ತಂಡವಿಶಿಷ್ಟ ರೀತಿಯಲ್ಲಿ ಆಚರಿಸಿದ್ದಾರೆ.

ನಟವರ್ಯ ಡ್ಯಾನ್ಸ್ ಸ್ಟುಡಿಯೋ ಇದರ ಮಾಲಕ ಕುಶಾಲಪ್ಪ ನೆಲ್ಯಾಡಿ ಇವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ  ಎ ೨೮ ರಂದು ಪುತ್ತೂರಿನ  ರೋಟರಿ ಬ್ಲಡ್ ಬ್ಯಾಂಕ್  ನಲ್ಲಿ 17ಮಂದಿ  ಸಾಮೂಹಿಕವಾಗಿ ರಕ್ತದಾನ ಮಾಡಿದ್ದಾರೆ.

ಅನಿಲ್ ರೈ ಹಾರ್ಪಳ,ಕುಶಾಲಪ್ಪ ,ವಿನೋದ್ ಶೆಟ್ಟಿ ಬಾಕಿಜಾಲ್,ಅನುಜ್ ನೆಲ್ಯಾಡಿ ,ಶೈಲೇಶ್ ನೆಲ್ಯಾಡಿ, ಗುಣಶೇಖರ್ ನೆಲ್ಯಾಡಿ ,ಯಶವಂತ್ ಇಚಿಲಂಪಾಡಿ,ಜಗದೀಶ್ ಗೌಡ ಕಾಯರ್ತಡ್ಕ,ಅಕ್ಷಯ್ ಎಚ್ ಪುತ್ತೂರು,ಸತೀಶ್ ಕಟ್ಟೆ ಮಜಲು,ನಾಗೇಶ್ ಕಟ್ಟೆ ಮಜಲು ,ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು ,ಹರೀಶ್ ಬೆದ್ರೋಡಿ,ಸ್ವ ಸ್ತಿಕ್ ನೆಲ್ಯಾಡಿ,ಸಂದೇಶ್ ಶೆಟ್ಟಿ ಆಮುಂಜೆ,ಶಶಿದರ್ ತೋಟ,ಜಯ ಸುವರ್ಣ ಹೊಸಮಜಲು ಇವರುಗಳು ರಕ್ತದಾನ ಮಾಡಿದ್ದಾರೆ. ಒಟ್ಟು ೧೨ ಯೂನಿಟ್ ರಕ್ತದಾನ ಮಾಡಿದ್ದು   ಇವರೆಲ್ಲರೂ ಹಿಂದೂ ಜಾಗರಣ ವೇದಿಕೆ  ನೆಲ್ಯಾಡಿ ಹಾಗೂ ಛತ್ರಪತಿ ಗ್ರೂಪ್ ಆಫ್ ಬಾಯ್ಸ್ ನೆಲ್ಯಾಡಿ ಇದರ ಸದಸ್ಯರಾಗಿದ್ದಾರೆ.

970×90