ಕಡಬದ ಪತ್ರಕರ್ತನ ಹೆಸರಲ್ಲಿ ನಕಲಿ ಅಕೌಂಟ್ |ಮೆಸೆಂಜರ್ ಮೂಲಕ  ಹಣಕ್ಕೆ ಡಿಮ್ಯಾಂಡ್

ಕಡಬದ ಪತ್ರಕರ್ತನ ಹೆಸರಲ್ಲಿ ನಕಲಿ  ಅಕೌಂಟ್ |ಮೆಸೆಂಜರ್ ಮೂಲಕ  ಹಣಕ್ಕೆ ಡಿಮ್ಯಾಂಡ್

ಕಡಬ ಟೈಮ್ಸ್, ಕಡಬ ಪಟ್ಟಣ :  ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು ಹಣ ವಂಚನೆ ಮಾಡುವ  ಜಾಲ  ಇದೀಗ ಪತ್ರಕರ್ತರನ್ನು ಬಿಟ್ಟಿಲ್ಲ.

ಉದಯವಾಣಿ  ಪತ್ರಿಕೆಯ ಕಡಬ ವರದಿಗಾರ   ನಾಗರಾಜ್ ಎನ್.ಕೆ. ಅವರ ಹೆಸರಿನಲ್ಲಿ ನ ಕಲಿ ಫೇಸ್ಬುಕ್ ಖಾತೆ ತೆರೆದು ಸೈಬರ್ ವಂಚಕರು  ಆಪ್ತ ವಲಯದಲ್ಲಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ನಕಲಿ ಫೇಸ್‍ಬುಕ್ ಖಾತೆ ಮೂಲಕ ಸ್ಥಳೀಯ ವ್ಯಕ್ತಿಯೋರ್ವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಅಪರಿಚಿತರು    ಮೆಸೆಂಜರ್ ಮೂಲಕ 12 ಸಾವಿರ ತುರ್ತು ಹಣದ ಅಗತ್ಯವಿದ್ದು, ತಕ್ಷಣವೇ ಕಳುಹಿಸಿಕೊಡುವಂತೆ ಸಂದೇಶ  ರವಾನಿಸಿದ್ದಾರೆ.  ಸಂಶಯಗೊಂಡ ಕಡಬದ ವ್ಯಕ್ತಿಯು  ನೇರವಾಗಿ ಪತ್ರಕರ್ತರನ್ನು ಸಂಪರ್ಕಿಸಿ ವಿಚಾರಿಸಿದಾಗ  ನಕಲಿ ಖಾತೆ ತೆರೆದಿರುವುದು ಬೆಳಕಿಗೆ ಬಂದಿದೆ.

ಬೇರೆಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಜನರನ್ನು ಯಾಮಾರಿಸುವ  ವಂಚಕರ ಜಾಲ ಸಕ್ರಿಯವಾಗಿದ್ದು ಪ್ರತಿಯೊಬ್ಬರು  ಎಚ್ಚರ ವಹಿಸಿ  ಮೋಸದ ಜಾಲದಲ್ಲಿ ಸಿಲುಕದಂತೆ ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿರುವ ನಾಗರಾಜ್ ಎನ್.ಕೆ‌.  ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

970×90