Kadaba Times ಜನಾಭಿಪ್ರಾಯ ಸಂಗ್ರಹ: ಲಾಕ್ ಡೌನ್ ಕ್ರಮ |ಠಾಣಾ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ಕಾರ್ಯವೈಖರಿಯನ್ನು ನೆನಪಿಸಿಕೊಂಡ ಜನರು

Kadaba Times ಜನಾಭಿಪ್ರಾಯ ಸಂಗ್ರಹ: ಲಾಕ್ ಡೌನ್ ಕ್ರಮ |ಠಾಣಾ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ಕಾರ್ಯವೈಖರಿಯನ್ನು ನೆನಪಿಸಿಕೊಂಡ ಜನರು

ಕಡಬ  ಟೈಮ್ಸ್, ವಿಶೇಷ ಸುದ್ದಿ:ಕಡಬ ಠಾಣಾ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಯಲ್ಲಿದ್ದ ಸಂದರ್ಭ ನಿಗದಿ ಪಡಿಸಿದ ಸಮಯಕ್ಕೆ ಮುನ್ನವೇ ಅಂಗಡಿಗಳು ಬಂದ್ ಆಗಿ ಜನರೂ ಮನೆಗೆ ಸೇರುತ್ತಿರುವುದು ಕಂಡು ಬಂದಿತ್ತು. ಇದಕ್ಕೆ ಮುಖ್ಯ ಕಾರಣ ಕಳೆದ ವರ್ಷ ಲಾಕ್ ಡೌನ್ ಸಂದರ್ಭ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ನೇತೃತ್ವದ ಪೊಲೀಸರ ಕಾರ್ಯವೈಖರಿ ಎಂಬುದು ಸಾರ್ವಜನಿಕರ ಒಟ್ಟು  ಅಭಿಪ್ರಾಯದಿಂದ  ಬಹಿರಂಗವಾಗಿದೆ.

ಕಡಬ ಟೈಮ್ಸ್ ವೆಬ್ ಸೈಟ್ ತಂಡವು ಠಾಣಾ ವ್ಯಾಪ್ತಿಯ ಆಲಂಕಾರು ,ಪೆರಾಬೆ, ಕಡಬ,ಮರ್ದಾಳ, ಬಿಳಿನೆಲೆ,ಕೋಡಿಂಬಾಳ,ನೂಜಿಬಾಳ್ತಿಲ ,ರಾಮಕುಂಜ ಸೇರಿದಂತೆ ಆಯ್ದ ಕೆಲ ಪ್ರದೇಶದಲ್ಲಿ ಒಟ್ಟು ನೂರು  ಜನರಿಂದ  ಅಭಿಪ್ರಾಯ ಸಂಗ್ರಹಿಸಿದೆ.

ಜನ ಸಾಮಾನ್ಯರಲ್ಲಿ ಪೊಲೀಸ್ ಇಲಾಖೆ ಮತ್ತು ಕೋವಿಡ್ ಕಾರ್ಯಪಡೆಯ ಕಾರ್ಯಚರಣೆ ಬಗ್ಗೆ  ಸಾಮಾನ್ಯ ಪ್ರಶ್ನೆ ಕೇಳಲಾಗಿತ್ತು . ಸುಮಾರು 84 ಜನರು ಸರ್ಕಾರದ ಸೂಚನೆಯಂತೆ  ಪೊಲೀಸರ ಬಿಗಿ ಕ್ರಮ, ಲಾಠಿ ಜಾರ್ಚ್, ನಿರಂತರ ಗಸ್ತು ಇವುಗಳಿಂದ ಜನ ಮನೆಯಿಂದಲೇ ಹೊರ ಬರಲಿಲ್ಲ  ಎಂದರಲ್ಲದೆ, ಎಸ್.ಐ ರುಕ್ಮ ನಾಯ್ಕ್ ಅವರ ಕಾರ್ಯ ವೈಖರಿಯನ್ನು ನೆನಪಿಸಿದ್ದಾರೆ.  16 ಮಂದಿ ಕೋವಿಡ್ ಕಾರ್ಯ ಪಡೆಯ ದಂಡ ಮತ್ತು ಪೊಲೀಸರ ಕಠಿಣ ಕ್ರಮದ  ಬಗ್ಗೆ  ಜಾಗೃತಗೊಂಡಿರುವುದಾಗಿ ತಿಳಿಯಪಡಿಸಿದ್ದಾರೆ.

ಈ  ಜನಾಭಿಪ್ರಾಯಕ್ಕೆ ಕಡಬ ಟೈಮ್ಸ್ ಬಳಗದಿಂದ ತರಾನಾಥ ,ಲೋಕೇಶ್, ಮಹೇಶ್, ಸುರೇಂದ್ರ,ರಮೇಶ.ವಿಕೆ, ಅಬ್ದುಲ್ ಅನಿಶ್  ಸಹಕರಿಸಿದ್ದರು.

970×90