ಸುಬ್ರಹ್ಮಣ್ಯ:ಐತ್ತೂರಿನಲ್ಲಿ ಮರಲೂಟಿ ಪ್ರಕರಣ| ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ದೂರುದಾರನ ವಿರುದ್ದ ಕೇಸು ದಾಖಲಾಗಿಲ್ಲ ಎಂದ ಅರಣ್ಯ ಇಲಖೆ

ಸುಬ್ರಹ್ಮಣ್ಯ:ಐತ್ತೂರಿನಲ್ಲಿ ಮರಲೂಟಿ ಪ್ರಕರಣ| ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ದೂರುದಾರನ ವಿರುದ್ದ ಕೇಸು ದಾಖಲಾಗಿಲ್ಲ ಎಂದ ಅರಣ್ಯ ಇಲಖೆ

ಕಡಬ ಟೈಮ್ಸ್, ಸುಬ್ರಹ್ಮಣ್ಯ: ಐತ್ತೂರಿನಲ್ಲಿ ಮರಲೂಟಿ ಪ್ರಕರಣದ ದೂರುದಾರನ ವಿರುದ್ದ ಪ್ರಕರಣ ದಾಖಲಾದ ಪ್ರತಿಯನ್ನು   ಮಾಹಿತಿ ಹಕ್ಕಿನಡಿ ಕೇಳಿದ್ದು  ಯಾವುದೇ ಕೇಸು ದಾಖಲಾಗಿಲ್ಲ ಎಂಬ ಉತ್ತರ ಅರಣ್ಯ ಇಲಾಖೆ ನೀಡಿದೆ.

ನೀತಿ  ತಂಡದ ರಾಜ್ಯಾಧ್ಯಕ್ಷ ,ಆರ್.ಅಟಿ.ಐ ಕಾರ್ಯಕರ್ತ ಜಯಂತ್ ಟಿ  ಅವರು    ದೂರುದಾರ  ಪ್ರಸಾದ್ ಅವರ ಮನೆಗೆ  ಮಾರ್ಚ್ ೩ ರಂದು ರಾತ್ರಿ ದಾಳಿ ಮಾಡಿರುವುದನ್ನು ವಿರೋಧಿಸಿ ದೂರುದಾರರ  ಪ್ರತಿಭಟನೆಗೆ ಬೆಂಬಲಿಸಿ  ಒಂದುವಾರಗಳ ಕಾಲ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರರ ಬಳಿ   ಅರಣ್ಯಾಧಿಕಾರಿಯವರು ನೀಡಿರುವ  ಕೆಲ ಪ್ರತಿಗಳನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ . ಹೀಗಾಗಿ ಮಾಹಿತಿ ಹಕ್ಕಿನಡಿ ಆ ದಾಖಲೆ ಪತ್ರ ಮತ್ತು ಶೋಧ ನಡೆಸಲು ಇಲಾಖೆಯಿಂದ ನೀಡಿದ ಅನುಮತಿ ನಕಲು ಪ್ರತಿಯನ್ನು ಕೇಳಿದ್ದರು. ಇದೀಗ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆ ಕಚೇರಿಯಿಂದ ೩/೩/೨೦೨೧ ರಂದು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂಬ ಉತ್ತರ ನೀಡಿದ್ದಾರೆ.

970×90