ನೂಜಿಬಾಳ್ತಿಲ:ಮನೆಯಲ್ಲಿಯೇ ಉಳಿದುಕೊಂಡು ವ್ಯಾರಾಂತ್ಯ ಕರ್ಪ್ಯೂ ಗೆ ಸಹಕರಿಸಿದ ಗ್ರಾಮಸ್ಥರು

ನೂಜಿಬಾಳ್ತಿಲ:ಮನೆಯಲ್ಲಿಯೇ ಉಳಿದುಕೊಂಡು ವ್ಯಾರಾಂತ್ಯ ಕರ್ಪ್ಯೂ ಗೆ ಸಹಕರಿಸಿದ ಗ್ರಾಮಸ್ಥರು

ಕಡಬ ಟೈಮ್ಸ್, ನೂಜಿಬಾಳ್ತಿಲ:ಕೊರೊನಾ ಎರಡನೇ ಅಲೆ ಭೀತಿ ಹಿನ್ನಲೆಯಲ್ಲಿ ವಾರಾಂತ್ಯ  ಲಾಕ್ ಡೌನ್ ನ ಎರಡೂ ದಿನವೂ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿ ಸಂಪೂರ್ಣ ಸ್ತಬ್ಧಗೊಂಡಿತ್ತು.

ಕಲ್ಲುಗುಡ್ಡೆ, ರೆಂಜಿಲಾಡಿ ಗ್ರಾಮದ ಪೇರಡ್ಕ, ಗೋಳಿಯಡ್ಕ, ಇಚ್ಲಂಪಾಡಿ ಗ್ರಾ.ಪಂ. ವ್ಯಾಪ್ತಿ, ಕಡ್ಯ ಕೊಣಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಎರಡೂ ದಿನವು ಜನತೆ ಸಂಪೂರ್ಣ ಸಹಕಾರ ನೀಡಿ ಮನೆಯಲ್ಲಿಯೇ ಉಳಿದುಕೊಂಡರು.

ಕಡಬ ಪೊಲೀಸರು ಗಸ್ತು ವ್ಯವಸ್ಥೆ ಕೈಗೊಂಡಿದ್ದರು. ಬೆಳಗ್ಗೆ ಅಗತ್ಯ ವಸ್ತು ಖರೀದಿಗೆ ಅಂಗಡಿಗಳಿಗೆ ಕೆಲ ಮಂದಿ ಆಗಮಿಸಿ ಖರೀದಿಯಲ್ಲಿ ತೊಡಗಿದ್ದರು. ಗ್ರಾಮ ಪಂಚಾಯತಿ ವತಿಯಿಂದಲೂ ಜಾಗೃತಿ ಕಾರ್ಯ ನಡೆಸಲಾಗುತ್ತಿದೆ.

970×90