ಶಿರಾಡಿಯಲ್ಲಿ ಹೈವೆ ಬಿಟ್ಟು ಪ್ರಪಾತಕ್ಕೆ ಉರುಳಿ ಮರದಲ್ಲಿ ಸಿಲುಕಿಕೊಂಡ ಕಂಟೈನರ್ ಲಾರಿ |ಚಾಲಕ ಸ್ಥಳದಲ್ಲೇ ಸಾವು

ಶಿರಾಡಿಯಲ್ಲಿ ಹೈವೆ ಬಿಟ್ಟು  ಪ್ರಪಾತಕ್ಕೆ ಉರುಳಿ ಮರದಲ್ಲಿ ಸಿಲುಕಿಕೊಂಡ ಕಂಟೈನರ್ ಲಾರಿ  |ಚಾಲಕ ಸ್ಥಳದಲ್ಲೇ ಸಾವು

ಕಡಬ ಟೈಮ್ಸ್,ಗುಂಡ್ಯ:    ಕಂಟೈನರ್ ಲಾರಿಯೊಂದು ಪ್ರಪಾತಕ್ಕೆ  ಉರುಳಿ ಮರದಲ್ಲಿ ಸಿಲುಕಿಕೊಂಡ ಘಟನೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ ಎ.22 ರಂದು ನಸುಕಿನ ಜಾವ ನಡೆದಿದ್ದು, ಘಟನೆಯಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಾರ್ಖಂಡ್ ಮೂಲದ ನಸ್ರುಲ್ಲಾಖಾನ್ (30 ವ) ಮೃತ ಚಾಲಕ. ಕಾರುಗಳನ್ನು ಹೇರಿಕೊಂಡು ಹೋಗುವ ಕಂಟೈನರ್ ಲಾರಿ ಇದಾಗಿದ್ದು, ಗುರುವಾರ  ನಸುಕಿನ ಜಾವ ಸುಮಾರು ಎರಡು ಗಂಟೆಗೆ ಕೊಡ್ಯಕಲ್ಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಯ ಪ್ರಪಾತಕ್ಕೆ ಉರುಳಿ ಮರವೊಂದರಲ್ಲಿ ಸಿಲುಕಿಕೊಂಡಿತ್ತು.

ಮರದ ನಡುವೆ ಲಾರಿಯ ಕ್ಯಾಬೀನ್ ಜಾಮ್ ಆಗಿದ್ದು, ಲಾರಿ ಚಾಲಕ ಅದರಲ್ಲಿ ಸಿಲುಕಿಕೊಂಡಿದ್ದರು. ಸುದ್ದಿ ತಿಳಿದು  ನೆಲ್ಯಾಡಿ ಹೊರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಕ್ರೇನ್ ಸಹಾಯದಿಂದ ಹರಸಾಹಸ ಪಟ್ಟು ಲಾರಿ ಚಾಲಕನನ್ನು  ಅದರಿಂದ ಬಿಡಿಸಿ ಮೇಲಕ್ಕೆ ತಂದರಾದರೂ  ಚಾಲಕ ಮೃತಪಟ್ಟಿದ್ದರು.

970×90